ನವದೆಹಲಿ: ಕೋವಿಡ್ ಲಾಕ್ ಡೌನ್ ಸಡಿಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಕೇರಳದಲ್ಲಿ ಜುಲೈ 24 ಮತ್ತು 25ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ(ಜುಲೈ21) ಘೋಷಿಸಿದ್ದಾರೆ.
ಇದನ್ನೂ ಓದಿ:ಶ್ರೀಗಳು ನಡೆದಾಡುವ ದೇವರಾಗಬೇಕು.. ನಡೆದಾಡುವ ರಾಜಕಾರಣಿಯಾಗಬಾರದು : ವಿಶ್ವನಾಥ್
ರಾಜ್ಯದಲ್ಲಿ ಬಕ್ರೀದ್ ಆಚರಣೆ ನಂತರ ಗುರುವಾರದಿಂದ ಜೂನ್ 12 ಮತ್ತು 13ರಂದು ಹೊರಡಿಸಲಾಗಿದ್ದ ಕೋವಿಡ್ 19 ಮಾರ್ಗಸೂಚಿಯನ್ನು ಅನುಸರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಆಯಾ ಪ್ರದೇಶಗಳಲ್ಲಿ ಈಗಾಗಲೇ ಅನ್ವಯವಾಗುವ ವಿನಾಯ್ತಿ ಮತ್ತು ನಿರ್ಬಂಧಗಳು ಮುಂದುವರಿಯಲಿದೆ. ಯಾವುದೇ ನಿಮಯಗಳಡಿಯಲ್ಲಿಯೂ ಹೆಚ್ಚುವರಿಯಾಗಿ ಯಾವುದೇ ವಿನಾಯ್ತಿಯನ್ನು ನೀಡಲಾಗಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.
ಜೂನ್ 12 ಮತ್ತು 13ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಯಂತೆಯೇ ಜುಲೈ 24 ಮತ್ತು 25ರಂದು ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ಪ್ರಕಟಣೆ ತಿಳಿಸಿದೆ. ಶುಕ್ರವಾರ (ಜುಲೈ 23) ಕೇರಳದಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆ ಅಭಿಯಾನ ನಡೆಯಲಿದ್ದು, ಸುಮಾರು 3 ಲಕ್ಷ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಿರುವುದಾಗಿ ಹೇಳಿದೆ.