Advertisement

ಕೇರಳ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತಾಲಿಬಾನ್ ಮಾದರಿ: ಏನಿದು ವಿವಾದ?

07:49 PM Jul 08, 2022 | Team Udayavani |

ತ್ರಿಶೂರ್: ಕೇರಳದಲ್ಲಿ ಇಸ್ಲಾಮಿಕ್ ಸಂಘಟನೆಯೊಂದು ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಿಂಗ ರಾಜಕೀಯದ ಕುರಿತು ತರಗತಿಗಳನ್ನು ನಡೆಸುತ್ತಿದ್ದು, ಪುರುಷ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಿ, ಪರದೆಯಿಂದ ವಿಭಜಿಸಲಾಗಿದ್ದು, ವಿವಾದ ಭುಗಿಲೆದ್ದಿದೆ.

Advertisement

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು, ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ), ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿಗಳ ವಿಭಾಗ ಮತ್ತು ಇತರರು ಈ ರೀತಿಯ ತರಗತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

ಇಸ್ಲಾಮಿಕ್ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು ಎಂಬ ವಿಷಯದ ಕುರಿತು ಇಸ್ಲಾಮಿಸ್ಟ್ ಗುಂಪು – ಮುಜಾಹಿದ್ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ತರಗತಿಗಳನ್ನು ನಡೆಸಿದೆ. ತರಗತಿ ನಡೆಸಿದ ಗ್ರೂಪ್‌ನ ಪದಾಧಿಕಾರಿಯೊಬ್ಬರು ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಇದು ಬೆಳಕಿಗೆ ಬಂದಿದೆ. ಎರಡು ಲಿಂಗಗಳನ್ನು ಪ್ರತ್ಯೇಕಿಸಲು ಅವರು ಬಯಸಿದಂತೆ ಪರದೆಯನ್ನು ಹಾಕಬಹುದು ಎಂಬ ಅಭಿಪ್ರಾಯವನ್ನು ಹೊಂದಿರುವ ಗುಂಪು ತರಗತಿಗಳ ವೆಚ್ಚವನ್ನು ಭರಿಸುತ್ತಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.

ಖಾಸಗಿ ಜಾಗದಲ್ಲಿ ತರಗತಿಗಳು ನಡೆಯುತ್ತಿವೆ ಎಂದು ಸಮರ್ಥಿಸಿಕೊಳ್ಳಲಾಗಿದ್ದು, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷೆ ಅನುಶ್ರೀ ಪಿಟಿಐಗೆ ಹೇಳಿಕೆ ನೀಡಿದ್ದಾರೆ. “ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಇಂತಹ ಅಭಿಯಾನಗಳ ಭಾಗವಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಎಸ್‌ಎಫ್‌ಐ ಇದನ್ನು ದೊಡ್ಡ ಸವಾಲಾಗಿ ಪರಿಗಣಿಸುತ್ತದೆ ಎಂದು ಅನುಶ್ರೀ ಹೇಳಿದ್ದಾರೆ.

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು, ರಾಜ್ಯದಲ್ಲಿ ಪ್ರಗತಿಪರ ಜನ ವಿಜ್ಞಾನ ಚಳವಳಿ, ತರಗತಿಗಳನ್ನು ಖಂಡಿಸಿದ್ದು, ಪರದೆ ಏಕೆ ಎಂದು ಯಾರೂ ಪ್ರಶ್ನಿಸಲಿಲ್ಲ ಎಂದು ಕೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next