ಕೊಲ್ಲಂ: ಕೇರಳ ಸೇರಿದಂತೆ ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಉತ್ತರಾ ಕೊಲೆ ಪ್ರಕರಣದಲ್ಲಿ ಪತಿಯನ್ನು ದೋಷಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಶಿಕ್ಷೆಯ ಪ್ರಮಾಣವನ್ನು ಅ.13ರಂದು ಪ್ರಕಟಿಸಲಾಗುತ್ತದೆ ಎಂದು ನ್ಯಾಯಾಧೀಶ ಮನೋಜ್ ಎಂ. ಹೇಳಿದ್ದಾರೆ.
ಪತ್ನಿಯನ್ನೇ ನಾಗರಹಾವು ಕಚ್ಚಿಸಿ ಕೊಲೆ ಮಾಡಿಸಿದ ಆರೋಪ ದಲ್ಲಿ ಪತಿ ಸೂರಜ್ ಎಸ್.ಕುಮಾರ್‌ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಸಾಕ್ಷ್ಯನಾಶ, ವಿಷ ಪ್ರಾಶನ ಆರೋಪಗಳನ್ನು ಹೊರಿಸ ಲಾಗಿದೆ. ದೋಷಿ ಎಂದು ನ್ಯಾಯಾಧೀಶ ಮನೋಜ್ ಎಂ ಅವರು ಆದೇಶ ಪ್ರಕಟಿಸುವ ಸಂದರ್ಭದಲ್ಲಿ ಆರೋಪಿ ಕೂಡ ಕೋರ್ಟ್ ನಲ್ಲಿ ಹಾಜರಿದ್ದ.
ಅತ್ಯಂತ ಅಪರೂಪದ ಪ್ರಕರಣದಲ್ಲಿ ಸೂರಜ್ ಪತ್ನಿ ಉತ್ತರಾ (25) ಅವರನ್ನು ನಾಗರಹಾವು ಕಚ್ಚಿಸಿ ಕೊಲೆ ಮಾಡಿಸಿದ್ದ. 2020ರ ಮೇ 7ರಂದು ಉತ್ತರಾ ಸಂಶಯಾಸ್ಪದವಾಗಿ ಅಸುನೀಗಿದ್ದರು. ಸಂಶಯಗೊಂಡ ಉತ್ತರಾ ತಾಯಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಸಂಶಯದಿಂದ ಸೂರಜ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಾವು ಕಚ್ಚಿಸಿ ಕೊಲೆ ಮಾಡಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ.
ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ