Advertisement

ಕನ್ನಡ ಉದ್ಯೋಗಾರ್ಥಿಗಳಿಗೆ ಮಲಯಾಳ ಪ್ರಶ್ನೆ ಪತ್ರಿಕೆ : ಕೇರಳ ಲೋಕಸೇವಾ ಆಯೋಗದ ನಿರ್ಲಕ್ಷ್ಯ

09:43 AM Sep 06, 2022 | Team Udayavani |

ಕಾಸರಗೋಡು : ಕೇರಳ ಲೋಕಸೇವಾ ಆಯೋಗ ಶನಿವಾರ ನಡೆಸಿದ ಸ್ಥಳೀಯ ಆದಿವಾಸಿ ಎಸ್‌ಟಿಗೆ ಮೀಸಲಾಗಿರುವ ಫಾರೆಸ್ಟ್‌ ಬೀಟ್‌ ಅಧಿಕಾರಿ 92/22 ಕೆಟಗಿರಿ ಹುದ್ದೆಯ ಪರೀಕ್ಷೆಯಲ್ಲಿ ಕಾಸರಗೋಡಿನಲ್ಲಿ ಕನ್ನಡ ಉದ್ಯೋಗಾರ್ಥಿಗಳಿಗೆ ಪರೀಕ್ಷೆ ಸಂದರ್ಭ ಮಲಯಾಳ ಪ್ರಶ್ನೆ ಪತ್ರಿಕೆ ನೀಡಿ ವಂಚಿಸಿದ ಪ್ರಕರಣ ನಡೆದಿದೆ.

Advertisement

ಕಾಸರಗೋಡಿನ 10ಕ್ಕಿಂತಲೂ ಅಧಿಕ ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗೆ 2,000ಕ್ಕೂ ಅಧಿಕ ಉದ್ಯೋಗಾರ್ಥಿಗಳು ಹಾಜರಾಗಿದ್ದಾರೆ. ಇದರಲ್ಲಿ 500ರಷ್ಟು ಕನ್ನಡ ಉದ್ಯೋಗಾರ್ಥಿಗಳಿದ್ದರು. ಆದರೆ ಭಾಷಾ ಅಲ್ಪಸಂಖ್ಯಾಕರಾದ ಕನ್ನಡಿಗ ಹಾಗೂ ತಮಿಳರಿಗಾಗಿ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸದೇ ಕೇವಲ ಮಲಯಾಳದಲ್ಲಿಯೇ ನೀಡಿದ್ದರು.

ಗ್ರಾಮೀಣ ಪ್ರದೇಶವಾದ ಮಂಜೇಶ್ವರ, ಪೆರ್ಲ ಸಹಿತ ಹಲವು ಕಡೆಗಳಿಂದ ಆದಿವಾಸಿ ವಿಭಾಗಕ್ಕೆ ಒಳಪಟ್ಟವರು ಕಾಸರಗೋಡು, ಕಾಂಞಂಗಾಡು ಪ್ರದೇಶದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಅವರಿಗೆಲ್ಲ ಮಲೆಯಾಳದಲ್ಲಿಯೇ ಪ್ರಶ್ನೆ ಪತ್ರಿಕೆ ನೀಡುವ ಮೂಲಕ ಉದ್ದೇಶಪೂರ್ವಕವಾಗಿ ವಂಚಿಸಿದ್ದಾರೆ.

ಕನ್ನಡಿಗರಿಂದ ಹೋರಾಟ
ಪ್ರತೀ ವಿಷಯದಲ್ಲೂ ಕನ್ನಡಿಗರನ್ನು ವಂಚಿಸುವ ಕೇರಳ ಸರಕಾರ ಹಾಗೂ ಕೇರಳ ಲೋಕಸೇವಾ ಆಯೋಗದ ಇಂತಹ ವಂಚನೆಯ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಲು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರು ತೀರ್ಮಾನಿಸಿದ್ದಾರೆ.

ಪ್ರತೀ ವಿಷಯದಲ್ಲೂ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋಗುವಂತಾಗುತ್ತಿರುವುದು ಸರಕಾರದ ಕನ್ನಡ ವಿರೋಧಿ ನಿಲುವು ಆಗಿದೆ ಎಂದು ಭಾಷಾ ಅಲ್ಪಸಂಖ್ಯಾಕರು ಹೇಳಿದ್ದಾರೆ.

Advertisement

ಇದನ್ನೂ ಓದಿ : ವೈಭವದ ಮಡಿಕೇರಿ ದಸರಾ ಆಚರಣೆಗೆ ನಿರ್ಧಾರ : 1 ಕೋ.ರೂ. ಅನುದಾನ; 18 ಲಕ್ಷ ರೂ. ಜಿಎಸ್‌ಟಿ!

Advertisement

Udayavani is now on Telegram. Click here to join our channel and stay updated with the latest news.

Next