ತಿರುವನಂತಪುರಂ:ಕೇರಳ ರಾಜ್ಯ ಚುನಾವಣಾ ಆಯೋಗ ಡಿಸೆಂಬರ್ ನಲ್ಲಿ ಮೂರು ಹಂತಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಮುಂದಾಗಿದ್ದು, ಮೊದಲ ಹಂತದ ಚುನಾವಣೆ ಮಂಗಳವಾರ(ಡಿಸೆಂಬರ್ 15, 2020) ಶಾಂತಿಯುತವಾಗಿ ನಡೆದಿತ್ತು. ಬುಧವಾರ (ಡಿ.16, 2020) ಬೆಳಗ್ಗೆ ಮತಎಣಿಕೆ ಆರಂಭಗೊಂಡಿದ್ದು, ಆಡಳಿತಾರೂಢ ಎಲ್ ಡಿಎಫ್ ಮುನ್ನಡೆ ಸಾಧಿಸಿದೆ ಎಂದು ವರದಿ ತಿಳಿಸಿದೆ.
ಮುಂದಿನ ವರ್ಷ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಗೆ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎಗೆ ಈ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡರಂಗ ಮೈತ್ರಿಕೂಟ(ಎಲ್ ಡಿಎಫ್) ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಎರಡನೇ ಸ್ಥಾನದಲ್ಲಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಮಧ್ಯಾಹ್ನ 3.45ರವರೆಗಿನ ಮತಎಣಿಕೆ ಪ್ರಕಾರ:
Related Articles
ಗ್ರಾಮ ಪಂಚಾಯತ್:
ಸಿಪಿಎಂ ನೇತೃತ್ವದ ಎಲ್ ಡಿಎಫ್-515
ಕಾಂಗ್ರೆಸ್ ನೇತೃತ್ವದ ಯುಡಿಎಫ್-375
ಇತರೆ- 28
ಎನ್ ಡಿಎ-23
ಮುನ್ಸಿಪಲ್ ಕಾರ್ಪೋರೇಷನ್ಸ್:
ಎಲ್ ಡಿಎಫ್-04
ಯುಡಿಎಫ್-02
ಮಹಾನಗರಪಾಲಿಕೆ:
ಯುಡಿಎಫ್-45
ಎಲ್ ಡಿಎಫ್-35
ಇತರೆ-04
ಎನ್ ಡಿಎ-02
ಜಿಲ್ಲಾ ಪಂಚಾಯ್ತಿ:
ಎಲ್ ಡಿಎಫ್-10
ಯುಡಿಎಫ್-04
ಬ್ಲಾಕ್ ಪಂಚಾಯ್ತಿ:
ಎಲ್ ಡಿಎಫ್-112
ಯುಡಿಎಫ್-40