ಕಾಸರಗೋಡು: ಜಿಲ್ಲೆಯ ಒಬ್ಬರು ಸೇರಿದಂತೆ ಕೇರಳದಲ್ಲಿ ಶುಕ್ರವಾರ ಮತ್ತೆ 16 ಮಂದಿಗೆ ಕೋವಿಡ್-19 ಬಾಧಿಸಿದೆ. ವಯನಾಡು-5, ಮಲಪ್ಪುರಂ-4, ಕೋಯಿ ಕ್ಕೋಡ್, ಆಲಪ್ಪುಳ ತಲಾ 2, ಕಾಸರಗೋಡು, ಪಾಲಾಟ್, ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢವಾಗಿದೆ. ಇವರಲ್ಲಿ 7 ಮಂದಿ ವಿದೇಶದಿಂದ ಬಂದ ವರು. ಜಿಲ್ಲೆಯ ಅಜಾನೂರು ಪಂ.ನ 39 ವರ್ಷ ಪ್ರಾಯದ ಯುವಕ ಕುವೈಟ್‌ನಿಂದ ಕರಿಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ತಮಿಳುನಾಡಿನಿಂದ ಬಂದ ನಾಲ್ವರಿಗೆ, ಮುಂಬಯಿಯಿಂದ ಬಂದ ಇಬ್ಬರು, ಸಂಪರ್ಕ ದಿಂದ ಮೂವರಿಗೆ ರೋಗ ಬಾಧಿಸಿದೆ. ರಾಜ್ಯದಲ್ಲಿ ಒಟ್ಟು 576 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 80 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ವಾರಂಟೈನ್ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಮೋಟಾರ್ ಸೈಕಲ್ ಬ್ರಿಗೇಡ್ ನೇಮಿಸಲಾಗಿದೆ.
ಹಾಟ್ ಸ್ಪಾಟ್‌ಗಳು
ಮತ್ತೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕುಂಬಳೆ, ಪೈವಳಿಕೆ ಮತ್ತು ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಘೋಷಿಸಲಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
23 ಪ್ರಕರಣ ದಾಖಲು
ಲಾಕ್‌ಡೌನ್ ಉಲ್ಲಂಘನೆ ಸಂಬಂಧ ಜಿಲ್ಲೆಯಲ್ಲಿ 23 ಪ್ರಕರಣ ದಾಖಲಿಸಲಾಗಿದೆ. 28 ಮಂದಿಯನ್ನು ಬಂಧಿಸಲಾಗಿದೆ.
ಪೈವಳಿಕೆ ಪಂ. ಕಚೇರಿ ಬಂದ್
ಕುಂಬಳೆ: ಪೈವಳಿಕೆ ಗ್ರಾ.ಪಂ. ಸದಸ್ಯೆಗೆ ಸೋಂಕು ಬಾಧಿಸಿರುವ ಹಿನ್ನೆಲೆಯಲ್ಲಿ ಪಂಚಾಯತ್ ಕಚೇರಿಯನ್ನು ಮುಚ್ಚಲಾ ಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯ ದರ್ಶಿ, ಮಾಜಿ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಕಚೇರಿಯ ವಾಹನ ಚಾಲಕ ಮೊದಲಾದವರನ್ನು ನಿಗಾದಲ್ಲಿಡಲಾಗಿದೆ.