Advertisement

ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

09:18 PM Mar 22, 2022 | Team Udayavani |

ಕೊಚ್ಚಿ:ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಎ.ಸಂಜಿತ್ (27) ಎಂಬುವರ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂಬ ಅರ್ಜಿಯ ಬಗ್ಗೆ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

Advertisement

ವಾದ ಮಂಡನೆಯ ಬಳಿಕ ನ್ಯಾ.ಕೆ.ಹರಿಪಾಲ್‌ ನೇತೃತ್ವದ ನ್ಯಾಯಪೀಠ ಆದೇಶ ಕಾಯ್ದಿರಿಸುವುದಾಗಿ ಪ್ರಕಟಿಸಿತು.

ಇದನ್ನೂ ಓದಿ:ಭವಿಷ್ಯದಲ್ಲಿ ಜೈವಿಕ ತಂತ್ರಜ್ಞಾನದ್ದು ನಿರ್ಣಾಯಕ ಪಾತ್ರ : ಸಚಿವ ಅಶ್ವತ್ಥನಾರಾಯಣ

ಈ ಹಿಂದೆ ನಡೆದಿದ್ದ ವಾದ ಮಂಡನೆ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯ ಅಗತ್ಯವಿದೆ ಎಂದು ಒಂದು ಹಂತದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ನವೆಂಬರ್‌ 2021ರಲ್ಲಿ ಸಂಜಿತ್ ಹತ್ಯೆಯಾಗಿತ್ತು.

 

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next