Advertisement

ಇಸ್ರೋ ವಿಜ್ಞಾನಿಗೆ ಕೇರಳ ಸರಕಾರ 1.30 ಕೋಟಿ ಮಾನನಷ್ಟ ಪರಿಹಾರ

12:45 AM Aug 13, 2020 | mahesh |

ತಿರುವನಂತಪುರ: ಸುಳ್ಳು ಬೇಹುಗಾರಿಕೆ ಆರೋಪ ಹೊರಿಸಿ, ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದ ಕೇರಳ ಸರಕಾರ 1.30 ಕೋಟಿ ರೂ.ಗಳ ಮಾನನಷ್ಟ ಪರಿಹಾರವನ್ನು ಹಸ್ತಾಂತರಿಸಿದೆ.

Advertisement

ಈಗಾಗಲೇ ಅವರಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ಆಧಾರದಲ್ಲಿ 50 ಲಕ್ಷ ರೂ., ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ 10 ಲಕ್ಷ ರೂ.ಗಳನ್ನೂ ನೀಡಲಾಗಿದೆ. ಇದರ ಜತೆಗೆ ಕ್ಯಾಬಿನೆಟ್‌ನ ನಿರ್ಣಯದಂತೆ 1.30 ಕೋಟಿ ಪರಿಹಾರ ಹಣವನ್ನು ಕೇರಳ ಸರಕಾರ ವಿಜ್ಞಾನಿಗೆ ನೀಡಿದೆ. ರಾಜ್ಯ ಮುಖ್ಯ ಪೊಲೀಸ್‌ ಖಾತೆ ಯಿಂದ ಈ ಹಣ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?: 1994ರಲ್ಲಿ ಇಸ್ರೋ ವಿಜ್ಞಾನಿಗಳಾಗಿದ್ದ ನಂಬಿ ನಾರಾಯಣ್‌ ಹಾಗೂ ಇತರ ಐವರು ರಾಕೆಟ್‌ ಹಾಗೂ ಸ್ಯಾಟಲೈಟ್‌ ಉಡಾವಣೆ ಸಂಬಂಧಿತ ಡೇಟಾಗಳನ್ನು ಪಾಕಿಸ್ಥಾನ ಹಾಗೂ ರಷ್ಯಾಕ್ಕೆ ರಹಸ್ಯವಾಗಿ ನೀಡಿದ್ದಾರೆ ಎಂದು ಆರೋಪಿಸಿ, 40 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಸಿಬಿಐ ವಿಚಾರಣೆಯಲ್ಲಿ ಇಸ್ರೋ ವಿಜ್ಞಾನಿಗಳು ದೋಷಮುಕ್ತರಾಗಿದ್ದರು. ವಿನಾಕಾರಣ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಕೇರಳ ಸರಕಾರಕ್ಕೆ ಸುಪ್ರೀಂ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next