Advertisement

ಸಮಾನ ನಾಗರಿಕ ಸಂಹಿತೆಗೆ ಕೇರಳ ರಾಜ್ಯಪಾಲರ ಬೆಂಬಲ

10:15 PM Dec 10, 2022 | |

ನವದೆಹಲಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಂವಿಧಾನವನ್ನು ಗೌರವಿಸುವ ಯಾವ ವ್ಯಕ್ತಿಯೂ ಇದನ್ನು ವಿರೋಧಿಸುವುದಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಹೇಳಿದ್ದಾರೆ.

Advertisement

ಶುಕ್ರವಾರ ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಎಂಬುವುದು ಮದುವೆ ಅಥವಾ ಸಂಪ್ರದಾಯಕ್ಕೆ ಸಂಬಂಧಿಸಿದ್ದಲ್ಲ. ಅದು ಸಮಾನ ನ್ಯಾಯಕ್ಕೆ ಸಂಬಂಧಿಸಿದ್ದು. ಕೆಲವೊಂದು ಕಡೆ ಇಬ್ಬರು ಪತ್ನಿಯರನ್ನು ಹೊಂದಲೆಂದೇ ಕೆಲವರು ಬೇರೆ ಧರ್ಮಕ್ಕೆ ಮತಾಂತರಗೊಂಡಂಥ ಘಟನೆಗಳೂ ನಮ್ಮ ಮುಂದಿವೆ. ಯಾರು, ಏನು ಎಂಬುದನ್ನು ನಾನು ಹೇಳುವುದಿಲ್ಲ.

ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಪ್ರತಿಜ್ಞಾವಿಧಿ ಸ್ವೀಕರಿಸಿದ ಯಾರೂ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಬಾರದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next