ಕುಂಬಳೆ: ಕೇರಳವನ್ನಾಳುವ ಎಡರಂಗ ಸರಕಾರದ ಸಚಿವರು ಸ್ವಜನ ಪಕ್ಷಪಾತ, ಲೈಂಗಿಕ ಹಗರಣ, ಸರಕಾರಿ ಭೂಸ್ವಾಧೀನ ಹಗರಣ ಸಹಿತ ಹಲವು ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವರು.ಸಚಿವರ ಸಂಭಂಧಿಕರಿಗೆ ಉದ್ಯೋಗ ನೀಡಿಕೆ, ಆದಿವಾಸಿ ಯುವಕನ ಕೊಲೆ, ಕಾಂಗೈ ನಾಯಕ ಶುಹೈಬ್ ಕೊಲೆ ಸಹಿತ ಅನೇಕ ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಮಾಡಿದ ಸಹಿತ ಅಕ್ರಮ ರಾಜಕೀಯ ನಡೆಸಿದ ಸರಕಾರದ ದುರಾಡಳಿತಕ್ಕೆ ನ್ಯಾಯಾಲಯ ಕೂಡ ಛೀಮಾರಿ ಹಾಕಿರುವುದು ನಾಚಿಕೆಗೇಡು ಎಂಬುದಾಗಿ ಬಿ.ಜೆ.ಪಿ. ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ವೇಲಾಯುಧನ್ ಆರೋಪಿಸಿದರು.
ಪಕ್ಷದ ರಾಜ್ಯ ಸಮಿತಿಯ ತೀರ್ಮಾನ ದಂತೆ ರಾಜ್ಯಾದ್ಯಂತ ಕೇರಳರಾಜ್ಯ ಸರಕಾರದ ಜನದ್ರೋಹಿ ನೀತಿ ವಿರುದ್ಧ ಕೊಲೆ ರಾಜಕೀಯ, ಬೆಲೆ ಏರಿಕೆ, ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರದ ಯೋಜನೆ ಎಂಬುದಾಗಿ ಪ್ರಚಾರ ಪಡಿಸುವುದನ್ನು ಪ್ರತಿಭಟಿಸಿ ರಾಜ್ಯದ ಎಲ್ಲ ಮಂಡಲಗಳಲ್ಲಿ ಬಿ.ಜೆ.ಪಿ. ಆಯೋಜಿಸಿದ ಆಹೋರಾತ್ರಿ ನಡೆದ ಪ್ರತಿಭಟನಾ ಕಾರ್ಯಕ್ರಮದ ಅಂಗವಾಗಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಪೈವಳಿಕೆ ಪಂಚಾಯತ್‌ನ ಚಿಪ್ಪಾರುಪದವಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ವೇಲಾಯುಧನ್ ಮಾತನಾಡಿ ಕಳೆದ 25 ವರ್ಷಗಳ ಕಾಲದ ತ್ರಿಪುರದ ಸಿ.ಪಿ.ಎಂ. ಆಡಳಿತ ಕೊನೆಗೊಂಡಿದ್ದು ಮುಂದಿನ ಚುನಾವಣೆಯಲ್ಲಿ ಕೇರಳ ಸರಕಾರದಲ್ಲಿ ಎಡರಂಗದ ದುರಾಡಳಿ ಅಂತ್ಯವಾಗಲಿರುವುದೆಂದರು.
ಬಿ.ಜೆ.ಪಿ.ಮಂಡಲ ಉಪಾಧ್ಯಕ್ಷೆ ಕೆ. ಜಯಲಕ್ಷ್ಮೀ ಭಟ್ ಅಧ್ಯಕ್ಷತೆ ವಹಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯ ಮಂಜೇಶ್ವರ, ಮಂಡಲಪ್ರಬಾರಿ ಕುಂಟಾರು ರವೀಶ ತಂತ್ರಿ, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಪಿ. ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿದರು.
ರಾಜ್ಯ ಸಮಿತಿ ಕೌನ್ಸಿಲ್ ಸದಸ್ಯೆ ಸರೋಜಾ ಆರ್. ಬಲ್ಲಾಳ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಅಮೆಕ್ಕಳ, ಜಿಲ್ಲಾ ಕಾರ್ಯದರ್ಶಿ ಪುಷ್ಪಾಲಕ್ಷ್ಮೀ, ಒ.ಬಿ.ಸಿ. ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ನವೀನ್ ರಾಜ್, ಜಿಲ್ಲಾ ಕಾರ್ಯದರ್ಶಿ ಪುಷ್ಪರಾಜ್ ಐಲ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರನ್ ಮತ್ತು ಧನರಾಜ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಕೆ.ವಿ., ಜಿಲ್ಲಾ ಸಮಿತಿ ಸದಸ್ಯರಾದ ಹರಿಶ್ಚಂದ್ರ ಮಂಜೇಶ್ವರ, ಮಣಿಕಂಠ ರೈ, ಬಿ.ಜೆ.ಪಿ. ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಬಿ.ಜೆ.ಪಿ. ಮಂಡಲ ಕಾರ್ಯದರ್ಶಿ ಜಯಂತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಿ ಪ್ರಸಾದ್ ಶೆಟ್ಟಿ ಪೆರ್ವಡಿ ಪ್ರಾರ್ಥನೆ ಹಾಡಿದರು.ಮಂಡಲ ಕಾರ್ಯದರ್ಶಿಗಳಾದ ಮುರಳೀಧರ ಯಾದವ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ವಂದಿಸಿದರು. ಆದರ್ಶ್ ಮಂಜೇಶ್ವರ ನಿರೂಪಿಸಿದರು.
ಮಹಿಳೆಯರ ಸಹಿತ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ ಕಾರ್ಯಕ್ರಮದ ಸಮಾರೋಪ ಸಮಾರಂಭವು ರವಿವಾರ ಸಂಜೆ ಜರಗಿತು. ಬಿ.ಜೆ.ಪಿ. ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಸುನಿಲ್ ಸಮಾರೋಪ ಭಾಷಣ ಮಾಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು, ಜಿಲ್ಲಾ ಕಾರ್ಯದರ್ಶಿ ಸುಮಿತ್‌ರಾಜ್ ಪೆರ್ಲ, ಪರಿಶಿಷ್ಟ ಜಾತಿ,ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಎ.ಕೆ. ಕಯ್ನಾರ್, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್, ಅಲ್ಪಸಂಖ್ಯಾಕ ಮಂಡಲಮೋರ್ಚಾ ಅಧ್ಯಕ್ಷ ಅಬ್ದುಲ್ಲ ಪಿ.ಎಂ. ಮುಂತಾದ ನಾಯಕರು ಉಪಸ್ಥಿತರಿದ್ದರು.