Advertisement

ಕೇರಳ ಸರಕಾರದ ಜನದ್ರೋಹಿ ನೀತಿ : ಆರೋಪ

04:05 PM Feb 23, 2017 | Harsha Rao |

ಹೊಸಂಗಡಿ: ಕೇರಳದ ಎಡರಂಗ ಸರಕಾರ ಬಡವರಿಗೆ ರೇಶನ್‌ ವಿತರಿಸದೆ ಬಡ ಜನರನ್ನು ಉಪವಾಸ ಬೀಳುವಂತೆ ಮಾಡಿದೆ. ಕೇಂದ್ರ ಸರಕಾರ ಕೇರಳದ ಬೇಡಿಕೆಯಂತೆ ಅಕ್ಕಿಯನ್ನು ಈಗಾಗಲೇ ಕೇರಳಕ್ಕೆ ನೀಡಿರುವಾಗ ಜನಸಾಮಾನ್ಯರಿಗೆ ರೇಶನ್‌ ಅಂಗಡಿಗಳ ಮೂಲಕ ವಿತರಣೆಯಾಗಬೇಕಾದ ಅಕ್ಕಿ ಗೋದಾಮುಗಳಿಂದ ವಿಲೇವಾರಿ ಯಾಗದೆ ಉಳಿದಿರುವುದು ಖಂಡ ನೀಯ. ಎಡರಂಗ ಆರೋಪವನ್ನು ಕೇಂದ್ರ ಸರಕಾರದ ಮೇಲೆ ಹೊರಿಸ ಹೊರಟಿರುವುದು ಕಪಟತನ ಎಂದು ಯುವಮೋರ್ಚಾ ಜಿಲ್ಲಾ ಅಧ್ಯಕ ಪಿ.ಆರ್‌. ಸುನಿಲ್‌ ಕುಮಾರ್‌ ಹೇಳಿದರು.
ಕೇರಳ   ಸರಕಾರದ  ಜನದ್ರೋಹಿ   ನೀತಿ ಯನ್ನು ಪ್ರತಿಭಟಿಸಿ ಕುಂಜತ್ತೂರಿನಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್‌ ಸಮಿತಿ ಆಯೋಜಿಸಿದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ತಾರಾನಾಥ ಹೊಸಂಗಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಮಂಜೇ ಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್‌ ಬಿ.ಎಂ. ಮಾತನಾಡಿ ಕೇರಳದ ಎಡ ಮತ್ತು ಐಕ್ಯರಂಗಗಳ ಹೊಂದಾಣಿಕೆ ರಾಜಕೀಯವನ್ನು ವಿವರಿಸಿದರು. ಕೇಂದ್ರದ ಯೋಜನೆಗಳನ್ನು ತನ್ನದೆಂದು ಬಿಂಬಿಸ ಹೊರಟಿರುವ ಕೇರಳ ಸರಕಾರದ ಎಡಬಿಡಂಗಿ ರಾಜಕೀಯ ಜನತೆ ಅರ್ಥ ಮಾಡಿಕೊಂಡಿದ್ದಾರೆ. ನೈತಿಕ ರಾಜಕೀಯವಿಲ್ಲದ ಎಡರಂಗ ಮುಸ್ಲಿಂ ಲೀಗ್‌, ಕಾಂಗ್ರೆಸ್‌ ಪೈವಳಿಕೆ ಪಂಚಾಯತ್‌ನಲ್ಲಿ ನಡೆಸುತ್ತಿರುವ ಅನೈತಿಕ ರಾಜಕೀಯ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ಹರಿಶ್ಚಂದ್ರ ಎಂ., ಪದ್ಮನಾಭ ಕಡಪ್ಪುರ, ಯಾದವ ಬಡಾಜೆ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಬಾಬು ಮಾಸ್ತರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next