Advertisement

ಮತ್ತೆ ವುಹಾನ್‌ಗೆ ತೆರಳಲು ತ್ರಿಶೂರ್‌ನ ಯುವತಿ ಸಿದ್ಧತೆ ; ಚಿಗುರಿದ ಸೋಂಕಿತೆಯ ಕನಸು

11:12 PM Jan 30, 2022 | Team Udayavani |

ಕೊಚ್ಚಿ: ಕೊರೊನಾ ಎಷ್ಟರಮಟ್ಟಿಗೆ ಜನಜೀವನವನ್ನು ನಲುಗಿಸಿದೆಯೆಂದರೆ, ಸೋಂಕಿನ ಮೂಲವಾದ “ವುಹಾನ್‌’ನ ಹೆಸರು ಕೇಳಿದರೂ ಜನ ಬೆಚ್ಚಿಬೀಳುತ್ತಾರೆ. ಆದರೆ, ಭಾರತದ ಮೊದಲ ಸೋಂಕಿತೆ, ಕೇರಳದ ತ್ರಿಶೂರ್‌ನ ಈ ಯುವತಿ ಮಾತ್ರ ಮತ್ತೆ ಚೀನಾದ ವುಹಾನ್‌ಗೆ ತೆರಳಲು ರೆಡಿಯಾಗಿ ಕುಳಿತಿದ್ದಾಳೆ!

Advertisement

ಹೌದು. ವುಹಾನ್‌ನ ಮೆಡಿಕಲ್‌ ಕಾಲೇಜಿನಲ್ಲಿ ಕಲಿತು ವೈದ್ಯೆಯಾಗಬೇಕು ಎನ್ನುವುದು ಅವಳ ಬಾಲ್ಯದ ಕನಸಾಗಿತ್ತು. ಅದರಂತೆ, ಆಕೆ ವುಹಾನ್‌ನಲ್ಲಿ ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಯಾಗಿದ್ದಳು. ಆದರೆ, ಸರಿಯಾಗಿ 2 ವರ್ಷಗಳ ಹಿಂದೆ ಅಂದರೆ 2020ರ ಜನವರಿ 30ರಂದು ಆಕೆಯ ದೇಹವನ್ನು ಕೊರೊನಾ ಪ್ರವೇಶಿಸಿತ್ತು. ಆ ಮೂಲಕ ಕೊರೊನಾ ಸೋಂಕು ದೃಢಪಟ್ಟ ಮೊದಲ ಭಾರತೀಯಳು ಎಂಬ ಹಣೆಪಟ್ಟಿ ಆಕೆಗೆ ದಕ್ಕಿತ್ತು. ಸೋಂಕು ದೃಢಪಡುವ ವಾರದ ಮುಂಚೆಯಷ್ಟೇ ಆಕೆ ಭಾರತಕ್ಕೆ ಬಂದಿದ್ದಳು.

ಮತ್ತೆ ವುಹಾನ್‌ಗೆ:
ಸ್ವದೇಶಕ್ಕೆ ಬಂದ ಬಳಿಕ ಆಕೆ ಕಳೆದ ಡಿಸೆಂಬರ್‌ನಲ್ಲಿ ಆನ್‌ಲೈನ್‌ ಮೂಲಕವೇ ಎಂಬಿಬಿಎಸ್‌ ಕೋರ್ಸ್‌ ಪೂರ್ಣಗೊಳಿಸಿದ್ದಾಳೆ. ಆದರೆ, ಪದವಿ ಸಿಗಬೇಕೆಂದರೆ ವುಹಾನ್‌ಗೆ ವಾಪಸಾಗಲೇಬೇಕು ಎಂಬುದು ಚೀನಾ ಸರ್ಕಾರದ ನಿಯಮ. ಅದರಂತೆ, ಎಂಬಿಬಿಎಸ್‌ ವಿದ್ಯಾರ್ಥಿಗಳು 52 ವಾರಗಳ ಕಾಲ ಅಲ್ಲಿನ ಆಸ್ಪತ್ರೆಗಳಲ್ಲಿ ಇಂಟರ್ನ್ಶಿಪ್‌ ಮಾಡಬೇಕು. ಹೀಗಾಗಿ, ತಾನೂ ವುಹಾನ್‌ಗೆ ತೆರಳಿ ವೈದ್ಯೆಯಾಗುವ ತನ್ನ ಕನಸನ್ನು ನನಸು ಮಾಡಲು ಯುವತಿ ಮುಂದಾಗಿದ್ದಾಳೆ.

ಇದನ್ನೂ ಓದಿ:ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು

ಈಕೆ ಮಾತ್ರವಲ್ಲದೇ, ಭಾರತದ ನೂರಾರು ವಿದ್ಯಾರ್ಥಿಗಳು ಈಗ ವುಹಾನ್‌ಗೆ ತೆರಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಭಾರತ ಸರ್ಕಾರವು ಚೀನಾದೊಂದಿಗೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳ ಕೋರ್ಸ್‌ ಕಂಪ್ಲೀಟ್‌ ಮಾಡಲು ಅನುವು ಮಾಡಿಕೊಡಬೇಕು ಎನ್ನುವುದು ಆಕೆಯ ತಂದೆಯ ಕೋರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next