Advertisement

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

11:20 PM Jul 25, 2024 | Team Udayavani |

ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಸವಾರನೊಂದಿಗೆ ಹಿಂಬದಿ ಸವಾರ ಮಾತನಾಡಿದರೂ ದಂಡ ವಿಧಿಸ ಲಾಗುವುದು ಎಂದು ಕೇರಳ ಮೋಟಾರು ವಾಹನ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ದ್ವಿಚಕ್ರ ವಾಹನದಲ್ಲಿ ಇಬ್ಬರು ಗಟ್ಟಿಯಾಗಿ ಮಾತನಾಡಿದರೆ ಅದು ಸವಾರನ ಗಮನವನ್ನು ಬೇರೆಡೆ ಸೆಳೆದು ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಆ ಹೊಸ ಆದೇಶ ಹೊರಡಿಸಲಾಗಿದೆ.

ಸುತ್ತೋಲೆಯನ್ನು ಎಲ್ಲ ಆರ್‌ಟಿಒ ಕಚೇರಿಗಳಿಗೂ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next