Advertisement

Theerthahalli: ವಾಹನ ಚಲಾಯಿಸುವ ವೇಳೆಯೇ ಕುಸಿದು ಬಿದ್ದು ಯುವಕ ದುರ್ಮರಣ!

07:26 PM Sep 04, 2024 | Esha Prasanna |

ತೀರ್ಥಹಳ್ಳಿ: ಹೊದಲದ ಕೌದಳ್ಳಿ ಸಮೀಪದ ಹೊಸಗದ್ದೆಯ ಯುವಕನೊಬ್ಬ ವಾಹನ ಚಲಾಯಿಸುವ ವೇಳೆಯೇ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಸ್ಥಳದಲ್ಲೇ  ಮೃತಪಟ್ಟಿರುವ ದುರ್ಘಟನೆ ಬುಧವಾರ ಸಂಜೆ ಸಂಭವಿಸಿದೆ.

Advertisement

ಸಂತೋಷ (34 ವರ್ಷ) ಮೃತ ಪಟ್ಟ ದುರ್ದೈವಿ. ಬುಧವಾರ ಮಧ್ಯಾಹ್ನದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ದ್ವಿ ಚಕ್ರ (ಸ್ಕೂಟಿ) ವಾಹನದಲ್ಲಿಯೇ ಹೊರಟು ಹೊದಲದ ಅಂಗಡಿಯೊಂದರ ಬಳಿ ಬಂದು ಕುಳಿತಿದ್ದಾರೆ. ನಂತರ ಅಲ್ಲಿಂದ ತೀರ್ಥಹಳ್ಳಿ ಆಸ್ಪತ್ರೆಗೆ ತೆರಳುವಾಗ ವಡ್ಡಿನಬೈಲು ಸಮೀಪ ಬರುವ ವೇಳೆ ನಿಯಂತ್ರಣ ತಪ್ಪಿ ದ್ವಿ ಚಕ್ರ  ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸ್ಕೂಟಿಯೂ ಅವರ ಮೇಲೆ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರ  ಪತ್ನಿ ಬಾಣಂತಿಯಾಗಿದ್ದು ಮೂರು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಲಾಗುತ್ತಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.