Advertisement

Melkar: ಟ್ರಯರ್‌ಗೆ ಕೊಂಡು ಹೋದ ದ್ವಿಚಕ್ರ ವಾಹನ ವಂಚನೆ

09:05 PM Aug 22, 2024 | Team Udayavani |

ಬಂಟ್ವಾಳ: ಮೆಲ್ಕಾರಿನ ಸೆಂಕೆಡ್‌ ಹ್ಯಾಂಡ್‌ ವಾಹನಗಳ ಮಾರಾಟದ ಮಳಿಗೆಯಿಂದ ವ್ಯಕ್ತಿಯೋರ್ವ ದ್ವಿಚಕ್ರ ವಾಹನವನ್ನು ಟ್ರಯಲ್‌ ನೋಡಲು ತೆಗೆದುಕೊಂಡು ಹೋಗಿ ಮರಳಿ ಬಾರದೆ ವಂಚಿಸಿದ ಘಟನೆ ನಡೆದಿದೆ.

Advertisement

ಪುದು ಗ್ರಾಮದ ನಿವಾಸಿ ಮಹಮ್ಮದ್‌ ಶಮೀರ್‌ ಅವರು ಮೆಲ್ಕಾರಿನಲ್ಲಿ ಬೈಕ್‌ ಪಾಯಿಂಟ್‌ ಹೆಸರಿನ ಅಂಗಡಿಯಲ್ಲಿ ಸುಮಾರು 2 ವರ್ಷಗಳಿಂದ ಸೆಕೆಂಡ್‌ ಹ್ಯಾಂಡ್‌ ವಾಹನಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು. ಅವರು ಸುಮಾರು 2 ತಿಂಗಳ ಹಿಂದೆ ಟಿವಿಎಸ್‌ ದ್ವಿಚಕ್ರ ವಾಹನವನ್ನು ಖರೀದಿ ಮಾಡಿ ತನ್ನ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿದ್ದರು.

ಆ. 13ರಂದು ಮಳಿಗೆಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೋರ್ವ ದ್ವಿಚಕ್ರ ವಾಹನವನ್ನು ಖರೀದಿಸುವುದಾಗಿ ಹೇಳಿ ಟ್ರಯಲ್‌ ನೋಡಿ ಬರುವುದಾಗಿ ಹೋಗಿದ್ದಾರೆ. ಆದರೆ ಆತ ಈವರೆಗೂ ಮರಳಿ ಬಾರದೆ, ವಾಹನವನ್ನು ಹಿಂದಿರುಗಿಸದೆ ವಂಚಿಸಿದ್ದಾಗಿ ದೂರು ನೀಡಲಾಗಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next