ಕೊಚ್ಚಿ: ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಬೇಪೋರ್-ಕೊಚ್ಚಿ-ದುಬಾೖ ವಿಹಾರ ನೌಕಾ (ಕ್ರೂಸ್) ಸೇವೆಗೆ ಸರಕಾರ ಹಸುರು ನಿಶಾನೆ ತೋರಿದೆ. ಈ ಮೂಲಕ ವಿಮಾನ ಪ್ರಯಾಣ ದರಕ್ಕೆ ಹೋಲಿಸಿದರೆ ಕಡಿಮೆ ದರದಲ್ಲಿ ಪ್ರವಾಸಿಗರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ(ಯುಎಇ) ಪ್ರಯಾಣಿಸಬಹುದಾಗಿದೆ.
ಕ್ರೂಸ್ ಸೇವೆ ಆರಂಭಿಸುವಂತೆ ಹಲವು ದಿನಗಳಿಂದ ಎನ್‌ಆರ್‌ಐಗಳು ಆಗ್ರಹಿಸುತ್ತಿದ್ದರು. ಇದೀಗ ಅವರ ಬೇಡಿಕೆ ಸಾಕಾರಗೊಳ್ಳುತ್ತಿದೆ. ಕೇಂದ್ರ ಬಂದರು ಸಚಿವ ಸರ್ಬಾನಂದ ಸೊನೊವಾಲ್ ಅವರು ಬೇಪೋರ್-ಕೊಚ್ಚಿ-ದುಬಾೖ ಕ್ರೂಸ್ ಸೇವೆಯನ್ನು ಸೋಮವಾರ ಘೋಷಿಸಿದ್ದಾರೆ.
ಇನ್ನೊಂದೆಡೆ ಕೊಚ್ಚಿಯಿಂದ ದುಬಾೖಗೆ ವಿಮಾನ ಪ್ರಯಾಣ ದರಕ್ಕೆ ಹೋಲಿಸಿದರೆ ಕ್ರೂಸ್ ಪ್ರಯಾಣ ದರವು ಮೂರನೇ ಒಂದು ಭಾಗದಷ್ಟು ಇರಲಿದೆ. ವರದಿ ಪ್ರಕಾರ, ಕ್ರೂಸ್ ಟಿಕೆಟ್ ದರ 10,000ರೂ. ಇರಲಿದೆ. ಅಲ್ಲದೇ ವಿಮಾನದಲ್ಲಿ ಪ್ರಯಾಣಿಕರು ಕೊಂಡೊಯ್ಯುವ ಲಗೇಜ್ ತೂಕದ ಮೂರು ಪಟ್ಟು ಅಧಿಕ ಲಗೇಜ್ ಕೊಂಡೊಯ್ಯಲು ವಿಹಾರ ನೌಕೆ ಯಲ್ಲಿ ಅವಕಾಶವಿದೆ. ಒಂದು ಬಾರಿ ಕ್ರೂಸರ್‌ನಲ್ಲಿ 1,250 ಪ್ರಯಾಣಿಕರು ಸಂಚರಿಸಬಹುದು.
“ಡಿಸೆಂಬರ್ ಅಂತ್ಯದ ವೇಳೆಗೆ ಬೇಪೋರ್-ಕೊಚ್ಚಿ- ದುಬಾೖ ಕ್ರೂಸ್ ಸೇವೆ ಆರಂಭಕ್ಕೆ ಯೋಜಿಸಿದ್ದೇವೆ. ಇದ ರಿಂದ ಪ್ರವಾಸಿಗರ ಪ್ರಯಾಣ ವೆಚ್ಚ ತೀವ್ರವಾಗಿ ಕಡಿಮೆ ಯಾಗಲಿದೆ’ ಎಂದು ಇಂಡಿಯನ್ ಅಸೋಸಿಯೇಶನ್ ಶಾರ್ಜಾದ ಅಧ್ಯಕ್ಷ ವೈ.ಎ.ರಹೀಮ್ ಹೇಳಿದ್ದಾರೆ.
ಮೂರು ಪಟ್ಟು ಅಧಿಕ ಲಗೇಜ್ ಕೊಂಡೊಯ್ಯಲು ಅವಕಾಶ
ಒಂದು ಬಾರಿಗೆ 1,250 ಮಂದಿಯ ಪ್ರಯಾಣ ಸಾಧ್ಯ