Advertisement

ಸಿಪಿಎಂ ಪೋಸ್ಟರ್‌ನಲ್ಲಿ ಕಿಮ್‌ ಫೋಟೋ

07:35 AM Dec 18, 2017 | Team Udayavani |

ತಿರುವನಂತಪುರ: ಇಡುಕ್ಕಿ ಜಿಲ್ಲೆಯ ನೆಡುಂಕಂದಾಂನಲ್ಲಿ ನಡೆದ ಸಿಪಿಎಂನ ಸ್ಥಳೀಯ ಘಟಕದ ಸಮ್ಮೇಳನದ ಆಹ್ವಾನ ಪೋಸ್ಟರ್‌ನಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಫೋಟೋ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ.

Advertisement

ಈ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಟ್ವೀಟ್‌ ಮಾಡಿ, “ಉತ್ತರ ಕೊರಿಯಾ ಅಮೆರಿಕದತ್ತ ಕ್ಷಿಪಣಿ ದಾಳಿ ನಡೆಸಿದಂತೆ ಕೇರಳದಲ್ಲಿಯೂ ಸಿಪಿಎಂ ಬಿಜೆಪಿ, ಆರೆಸ್ಸೆಸ್‌ ಕಚೇರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾರದು ಎಂದು ನಿರೀಕ್ಷಿಸುತ್ತೇನೆ’ ಎಂದಿದ್ದಾರೆ.  ಮುಜುಗರಕ್ಕೆ ಈಡಾದ ಸಿಪಿಎಂ  ಕಣ್ತಪ್ಪಿನಿಂದ ಈ ಬೆಳವಣಿಗೆಯಾಗಿದೆ. ಅದನ್ನು ತೆರವುಗೊಳಿಲು ಸೂಚಿಸಲಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.