Advertisement

ಇಸ್ಲಾಮಿಕ್ ಸ್ಟೇಟ್‌ಗೆ ಬೆಂಬಲ: ಕೇರಳದ ಮೂವರು ದೋಷಿಗಳು

09:24 PM Jul 13, 2022 | Team Udayavani |

ಕೊಚ್ಚಿ: ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ ಬೆಂಬಲ ನೀಡಿದ್ದಕ್ಕಾಗಿ ಕೇರಳದ ಎರ್ನಾಕುಲಂನ ವಿಶೇಷ ಎನ್‌ಐಎ ನ್ಯಾಯಾಲಯವು ಮೂವರು ಸ್ಥಳೀಯರನ್ನು ದೋಷಿ ಎಂದು ಬುಧವಾರ ತೀರ್ಪು ನೀಡಿದೆ.

Advertisement

ನ್ಯಾಯಾಲಯವು ಮಂಗಳವಾರ ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿಗಳಾದ ಮಿದ್ಲಾಜ್, ಅಬ್ದುಲ್ ರಜಾಕ್ ಮತ್ತು ಹಮ್ಸಾ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಜುಲೈ 15 ರಂದು ಪ್ರಕಟಿಸಲಿದೆ.

ತಪ್ಪಿತಸ್ಥರು ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದು, ತಮ್ಮ ಉದ್ದೇಶಕ್ಕಾಗಿ ಹೋರಾಡಲು ಸಿರಿಯಾದಲ್ಲಿ ಐಸಿಸ್ ಗೆ ಸೇರಲು ಭಾರತದಿಂದ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಕ್ತಾರರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಪ್ರಾರಂಭಿಸಲು ತನಿಖಾ ಸಂಸ್ಥೆಯು ಅಕ್ಟೋಬರ್ 2017 ರಲ್ಲಿ ಕೇರಳ ಪೊಲೀಸ್ (ವಲಪಟ್ಟಣಂ ಪೊಲೀಸ್ ಠಾಣೆ) ಎಫ್‌ಐಆರ್ ಅನ್ನು ಮರು-ನೋಂದಣಿ ಮಾಡಿತ್ತು. ನಂತರ ಅದು ಮೂವರನ್ನು ಒಳಗೊಂಡಂತೆ ನಾಲ್ಕು ಜನರ ವಿರುದ್ಧ ಏಪ್ರಿಲ್ 2018 ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next