Advertisement

ಕಾಂಗ್ರೆಸ್‌ ಕಚೇರಿ ಮಾರಾಟಕ್ಕೆ!

04:01 PM Jun 11, 2018 | Sharanya Alva |

ತಿರುವನಂತಪುರಂ: ರಾಜ್ಯಸಭೆ ಸ್ಥಾನಕ್ಕೆ ಕೇರಳ ಕಾಂಗ್ರೆಸ್‌ (ಮಣಿ) ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧಿಸಿ ಎದ್ದಿರುವ ವಿವಾದ ಇದೀಗ ತಾರಕಕ್ಕೇರಿದ್ದು, ಕಾಂಗ್ರೆಸ್‌ ಕಚೇರಿ ಯನ್ನೇ ಒಎಲ್‌ಎಕ್ಸ್‌ ಜಾಲತಾಣದಲ್ಲಿ ಮಾರಾಟಕ್ಕಿಡಲಾಗಿದೆ! ಒಎಲ್‌ಎಕ್ಸ್‌ನಲ್ಲಿ ಅನೀಶ್‌ ಎಂಬ ವ್ಯಕ್ತಿ ಜಾಹೀರಾತು ನೀಡಿದ್ದು, ಇದಕ್ಕೆ 10 ಸಾವಿರ ರೂ. ಬೆಲೆ ನಿಗದಿಗೊಳಿಸಿದ್ದಾರೆ. 
 
ತಿರುವನಂತಪುರದ ಸಸ್ತಮಂಗಲಂ ಪ್ರದೇಶದಲ್ಲಿರುವ ಕಾಂಗ್ರೆಸ್‌ ಕಚೇರಿಯ ಫೋಟೋವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಖರೀದಿಸಲು ಆಸಕ್ತಿಯಿದ್ದವರು, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಅಥವಾ ಕೇರಳ ಕಾಂಗ್ರೆಸ್‌ ಅನ್ನು ಸಂಪರ್ಕಿಸಿ ಎಂದು ಬರೆಯಲಾಗಿದೆ.

Advertisement

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿ ಪಕ್ಷದ ನಿರ್ಧಾರದ ಬಗ್ಗೆ ಪಕ್ಷದೊಳಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯಸಭೆ
ಉಪಸಭಾಪತಿ ಪಿ.ಜೆ.ಕುರಿಯನ್‌ ಜು.1 ರಂದು ನಿವೃತ್ತರಾಗಲಿದ್ದು, ಇವರ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಸ್ಥಾನಕ್ಕೆ ಕೇರಳ ಕಾಂಗ್ರೆಸ್‌ ಪಕ್ಷ ಮುಖ್ಯಸ್ಥ ಕೆ.ಎಂ.ಮಣಿ ಪುತ್ರ ಜೋಸ್‌ ಕೆ ಮಣಿಯನ್ನು ಕಣಕ್ಕಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next