Advertisement
ಪಿಲಿಕ್ಕೋಡು ಕಾಲಿಕ್ಕಡವ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫಿಲಮೆಂಟ್ ಬಲ್ಬ್ ರಹಿತ ಪಂಚಾಯತ್ ಘೋಷಣೆ ಮಾಡಿದರು.
Related Articles
Advertisement
ಸೋಲಾರ್ ಪ್ಯಾನಲ್‌ಗಳನ್ನು ಸ್ಥಾಪಿಸಲು ಸಾಧ್ಯವಾಗುವ ರೀತಿಯಲ್ಲಿರುವ ಮನೆಗಳು, ಕಟ್ಟಡಗಳು ಕೇರಳದಲ್ಲಿ ಧಾರಾಳ ಇವೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ನ ಶೇಕಡಾ 70ರಷ್ಟನ್ನು ಹೊರಗಿನಿಂದ ಖರೀದಿಸಲಾಗುತ್ತಿದೆ. ಶೇಕಡಾ 30ರಷ್ಟು ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಹೆಚ್ಚಿನ ಪಾತ್ರ ಜಲವಿದ್ಯುತ್ ಯೋಜನೆಗಳದ್ದಾಗಿವೆ.ವಿದ್ಯುತ್ ವಲಯದಲ್ಲಿ ಅಭಿವೃದ್ಧಿಗೆ ಸರಕಾರವು ಹೆಚ್ಚಿನಪ್ರಾಧಾನ್ಯ ನೀಡುತ್ತಿದೆ. ಕೇರಳದ ಸಾರ್ವಜನಿಕ ಅಭಿವೃದ್ಧಿಯಲ್ಲಿ ಆಸಕ್ತಿ ಹಾಗೂ ಶ್ರದ್ಧೆ ವಹಿಸಿ ರಾಷ್ಟ್ರಕ್ಕೇ ಮಾದರಿಯಾಗುವ ರೀತಿಯಲ್ಲಿ ಎಲ್ಲರ ಸಹಕಾರದೊಂದಿಗೆ ವಿದ್ಯುತ್ ಮಂಡಳಿಯನ್ನು ಅಭಿವೃದ್ಧಿಗೊಳಿಸಲು ಸರಕಾರವು ಅಗತ್ಯದ ಕ್ರಮ ಕೈಗೊಳ್ಳುತ್ತಿದೆ.
ತೃಕ್ಕರಿಪುರ ಶಾಸಕ ಎಂ. ರಾಜ ಗೋಪಾಲನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ಸಂತೋಷ್ ಟ್ರೋಫಿ ಫುಟ್ಬಾಲ್ ಕಿರೀಟ ಪಡೆದ ಕೇರಳ ತಂಡದ ತಾರೆ ಪಿಲಿಕ್ಕೋಡು ನಿವಾಸಿ ಕೆ.ವಿ. ರಾಹುಲ್ ಅವರನ್ನು ಮುಖ್ಯಮಂತ್ರಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಕಾಸರಗೋಡು ಸಂಸದ ಪಿ. ಕರುಣಾಕರನ್ ಮುಖ್ಯ ಅತಿಥಿಯಾಗಿದ್ದರು.ಖಾದಿ ಮಂಡಳಿಯ ಉಪಾಧ್ಯಕ್ಷ ಎಂ.ವಿ. ಬಾಲಕೃಷ್ಣನ್, ನೀಲೇಶ್ವರ ಬ್ಲಾಕ್ ಪಂ. ಅಧ್ಯಕ್ಷೆ ವಿ.ಪಿ. ಜಾನಕಿ, ಮಾಜಿ ಶಾಸಕ ಕೆ. ಕುಂಞಿರಾಮನ್, ಜಿಲ್ಲಾ ಪಂಚಾಯತ್ ಸದಸ್ಯೆ ಪಿ.ವಿ. ಪದ್ಮಜಾ, ಬ್ಲಾಕ್ ಪಂ. ಸದಸ್ಯ ಎ. ಕೃಷ್ಣನ್, ಟಿ.ವಿ. ಗೋವಿಂದನ್, ಇ. ಕುಂಞಿರಾಮನ್, ಕೆ.ವಿ. ಗಂಗಾಧರನ್, ಬಂಗಳ ಕುಂಞಿಕೃಷ್ಣನ್, ಟಿ.ಕೆ. ಪೂಕ್ಕೋಯ ತಂಙಳ್, ಎನ್. ಭಾಸ್ಕರನ್, ಟಿ.ವಿ. ಅಡಿಯೋಡಿ, ಪಿ.ವಿ. ಗೋವಿಂದನ್, ಅನರ್ಟ್ ನಿರ್ದೇಶಕ ಆರ್. ಹರಿಕುಮಾರ್ ಉಪಸ್ಥಿತರಿದ್ದರು. ಪಿಲಿಕ್ಕೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ವಿ. ಶ್ರೀಧರನ್ ಸ್ವಾಗತಿಸಿ, ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಎಂ.ಕೆ.ಹರಿದಾಸ್ ವಂದಿಸಿದರು. ಘೋಷಣೆ ಪೂರ್ವಭಾವಿಯಾಗಿ ಕಾಲಿಕ್ಕಡವ್ ಸಿಂಡಿಕೇಟ್ ಬ್ಯಾಂಕ್‌ನ ಸಮೀಪ ಅನರ್ಟ್ ಹಾಗೂ ಇಎಂಸಿ ಕೇರಳ ಇವುಗಳ ಸಹಕಾರದೊಂದಿಗೆ ಹಲವು ವಿಷಯಗಳಲ್ಲಿ ವಿಚಾರ ಸಂಕಿರಣಗಳು ನಡೆದವು. ಸೋಲಾರ್ ವಿದ್ಯುತ್‌ಗೆ ಆದ್ಯತೆ
ಪಿಲಿಕ್ಕೋಡು ಗ್ರಾಮ ಪಂಚಾಯತ್ ಅನುಷ್ಠಾನಕ್ಕೆ ತಂದ ಫಿಲಮೆಂಟ್ ಬಲ್ಬ್ ರಹಿತ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸಲು ಸಾಧ್ಯವೇ ಎಂದು ಸರಕಾರವು ಆಲೋಚಿಸುತ್ತಿದೆ. ಅಲ್ಲದೆ ಸೋಲಾರ್‌ನಿಂದ ವ್ಯಾಪಕವಾಗಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿದೆಯೇ ಎಂಬುದರ ಕುರಿತು ಕೂಡ ಯೋಜನೆ ರೂಪಿಸಲಾಗುತ್ತಿದೆ. ಮಳೆಯ ಲಭ್ಯತೆಗೆ ಅನುಸಾರವಾಗಿ ಜಲ ವಿದ್ಯುತ್‌ನ ಉತ್ಪಾದನಾ ಪ್ರಮಾಣದಲ್ಲಿ ಏರಿಳಿತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂತಹ ವಿದ್ಯುತ್ ಉಪಯೋಗ ಕಡಿಮೆ ಮಾಡಿ ಸೋಲಾರ್‌ನಂತಹ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು. ಪಿಲಿಕ್ಕೋಡ್‌ಗೆ ವಿದ್ಯುತ್ ಸಂರಕ್ಷಣಾ ಪ್ರಶಸ್ತಿ
ಕೌಟುಂಬಿಕ ಬಳಕೆ ಸಹಿತ 10,000 ವಿದ್ಯುತ್ ಗ್ರಾಹಕರು ಪಿಲಿಕ್ಕೋಡು ಪಂಚಾಯತ್‌ನಲ್ಲಿದ್ದಾರೆ. ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಕಳೆದ ವರ್ಷ 1,20,328 ಘಟಕ ವಿದ್ಯುತ್ ಲಾಭ ಮಾಡಲು ಸಾಧ್ಯವಾಗಿರುವುದಾಗಿ ಎನರ್ಜಿ ಮೆನೇಜ್‌ಮೆಂಟ್ ಕೇಂದ್ರದ ಅಂಕಿ ಅಂಶಗಳು ಹೇಳುತ್ತಿವೆ. ಇದನ್ನು ಪರಿಗಣಿಸಿ ಕಳೆದ ವರ್ಷ ರಾಜ್ಯ ವಿದ್ಯುತ್ ಸಂರಕ್ಷಣಾ ಪ್ರಶಸ್ತಿಯನ್ನು ಪಿಲಿಕ್ಕೋಡಿಗೆ ನೀಡಲಾಗಿತ್ತು.