ತಿರುವನಂತಪುರಂ: ಒಂದು ವಯನಾಡ್ ಲೋಕಸಭಾ ಕ್ಷೇತ್ರದ ಜನತೆ ತನ್ನ ಆಯ್ಕೆ ಮಾಡಿದರೆ, ಸುಲ್ತಾನ್ ಬತ್ತೇರಿ ನಗರದ ಹೆಸರನ್ನು ಗಣಪತಿ ವಟ್ಟಾಂ ಎಂದು ಬದಲಾಯಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ, ವಯನಾಡ್ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್ ನೀಡಿರುವ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:
ಟಿಪ್ಪು ಸುಲ್ತಾನ್ ಯಾರು? ಆತ ವಯನಾಡಿಗೆ ಬಂದಿದ್ದು ಯಾವಾಗ, ಆತನಿಗೆ ಯಾಕೆ ಮಹತ್ವ ನೀಡಬೇಕು? ಇದು ಗಣಪತಿ ವಟ್ಟಂ ಎಂದೇ ಜನಪ್ರಿಯವಾದ ಸ್ಥಳವಾಗಿದೆ. ಜನರಿಗೆ ಈ ಬಗ್ಗೆ ಅರಿವು ಇದೆ. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಈಗಲೂ ಟಿಪು ಸುಲ್ತಾನ್ ಜತೆಗಿದೆ. ಈ ಸರ್ಕಾರಗಳೇ ಹೆಸರನ್ನು ಬದಲಾಯಿಸಿ ಸುಲ್ತಾನ್ ಬತ್ತೇರಿ ಎಂದು ಮಾಡಿರುವುದಾಗಿ ಸುರೇಂದ್ರನ್ ಆರೋಪಿಸಿದರು.
ಟಿಪ್ಪು ಸುಲ್ತಾನ್ ಕೇರಳದಲ್ಲಿ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿದ್ದ, ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೂ ಪಕ್ಷ ಆಕ್ಷೇಪ ಎತ್ತಿತ್ತು ಎಂದು ಸುರೇಂದ್ರನ್ ಹೇಳಿದರು.
Advertisement
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ರಾಹುಲ್ ಗಾಂಧಿ ಅಖಾಡಕ್ಕಿಳಿದಿದ್ದು, ಬಿಜೆಪಿಯಿಂದ ಕೆ.ಸುರೇಂದ್ರನ್ ಸ್ಪರ್ಧಿಸಿದ್ದಾರೆ. ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಅಂದು ವಯನಾಡ್ ಸೇರಿದಂತೆ ಕೇರಳದಲ್ಲಿ ಲಕ್ಷಾಂತರ ಮಂದಿ ಹಿಂದುಗಳನ್ನು ಮತಾಂತರ ಮಾಡಿದ್ದ.