ಕೇರಳ : ಭಾರತಿಯ ಜನತಾ ಪಕ್ಷ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶದ ಮಾದರಿಯಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ತರಲಿದೆ ಎಂದು ಕೇಂದ್ರ ಸಚಿವ ಡಿ, ವಿ ಸದಾನಂದ ಗೌಡ ಹೇಳಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಡಿ ವಿ. ಸದಾನಂದ ಗೌಡ, ದೇವಳದ ಆಡಳಿತವನ್ನು ನಿರ್ವಹಿಸುವ ದೇವಸ್ವಂ ಮಂಡಳಿಗಳನ್ನು ಮತ್ತೆ ರಚಿಸುತ್ತೇವೆ. ದೇವಸ್ವಂ ಮಂಡಳಿಗಳನ್ನು ನಿಜವಾದ ಭಕ್ತರಿಗೆ ಹಸ್ತಾಂತರ ಮಾಡುತ್ತೇವೆ ಎಂದರು.
ಓದಿ : ದೇಶ್ ಮುಖ್ ಪ್ರಕರಣ : ನಿಷ್ಪಕ್ಷ ತನಿಖೆಯಾಗಲಿ : ಸುಪ್ರೀಂ ಗೆ ‘ಮಹಾ’ಮೈತ್ರಿ ಮನವಿ
ಈ ಎರಡು ಭರವಸೆಗಳು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಪಕ್ಷದ ವಿಧಾನ ಸಭಾ ಪ್ರಣಾಳಿಕೆಯಲ್ಲಿ ಮುಖ್ಯ ಅಂಶಗಳಾಗಿರಲಿವೆ ಎಂದು ಅವರು ತಿಳಿಸಿದ್ದಾರೆ.
ಇನ್ನು, ಕೇರಳ ‘ಲವ್ ಜಿಹಾದ್’ ನ ಕೇಂದ್ರವಾಗಿ ಮಾರ್ಪಟ್ಟಿದೆ. ಕ್ರಿಶ್ಚಿಯನ್ ಸಮುದಾಯವನ್ನು ಇದು ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಇಂತಹ ಚಟುವಟಿಕೆಗಳಿಗೆ ಸಿಪಿಐ(ಎಮ್) ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಗೌಡ ಆರೋಪಿಸಿದ್ದಲ್ಲದೇ, ದೇವಸ್ವಂ ಸಿಪಿಐ(ಎಮ್) ನ ಕಾರ್ಯ ಚಟುವಟಿಕೆಗಳ ಕೇಂದ್ರಗಳಾಗಿತ್ತು. ದೇವಸ್ವಂ ಮಂಡಳಿಗಳನ್ನು ಈಗ ರದ್ದುಗೊಳಿಸಲಾಗಿದೆ. ನಮ್ಮ ಪಕ್ಷ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ದೇವಸ್ವಂ ಮಂಡಳಿಗಳನ್ನು ಪುನರಚಿಸಿ, ನಿಜವಾದ ದೇವರ ಭಕ್ತರಿಗೆ ಅದರ ಉಸ್ತುವಾರಿಯನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಸಿಪಿಐ ನ ಪ್ರಾಯೋಜಕತ್ವದಲ್ಲಿ ಕೇರಳ ‘ದೇಶ ವಿರೋಧಿ ಚಟುವಟಿಕೆಗಳ ಕೇಂದ್ರ’ವಾಗಿ ಮಾರ್ಪಟ್ಟಿದೆ. ಎಡ ಪಕ್ಷ ಕೇರಳದಲ್ಲಿ ಅಭಿವೃದ್ಧಿ ಕೆಲಸ ಮಾಡಲು ವಿಫಲವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವಾಧಿಕಾರ ಧೋರಣೆಯನ್ನು ಮಾಡುತ್ತಿದ್ದಾರೆ. ಪಾರದರ್ಶಕತೆಯನ್ನು ಉಳಿಸಿಕೊಳ್ಳುವಲ್ಲಿ ಅವರ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಸದಾನಂದ ಗೌಡ ಆರೋಪಿಸಿದ್ದಾರೆ.
ಓದಿ : ತಾನೂ ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರಮೋದ್ ಮುತಾಲಿಕ್