ತಿರುವನಂತಪುರಮ್ : ಯುಡಿಎಫ್ ಹಾಗೂ ಎಲ್ ಡಿ ಎಫ್ ಮೈತ್ರಿ ಸರ್ಕಾರ ಕೇರಳದ ಜನರಿಗೆ ದ್ರೋಹ ಬಗೆದಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿರುವ ಕೇರಳದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಯೋಗಿ, ಪಥನಮತ್ತಟ್ಟದಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿ, ‘ಕೇರಳದ ಜನರು ಯುಡಿಎಫ್ ಹಾಗೂ ಎಲ್ ಡಿ ಎಫ್ ಮೈತ್ರಿಯನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಮೈತ್ರಿ ಪಕ್ಷ ಕೇರಳದ ಜನರಿಗೆ ದ್ರೋಹ ಬಗೆದಿದೆ. ಈಗ ಸೇಡು ತೀರಿಸಿಕೊಳ್ಳುವುದಕ್ಕೆ ಸರಿಯಾದ ಸಮಯ ಬಂದಿದೆ. ಚುನಾವಣೆಯ ಮೂಲಕ ಬಿಜೆಪಿಯನ್ನು ಆರಿಸುವುದರ ಮೂಲಕ ದ್ರೋಹಕ್ಕೆ ತಕ್ಕ ಪಾಠ ಕಲಿಸಬಹುದಾಗಿದೆ’ ಎಂದು ಕೇರಳದ ಜನತೆಗೆ ಹೇಳಿದ್ದಾರೆ.
ಓದಿ : ಗಡಿ ಭದ್ರತಾ ಪಡೆಯಲ್ಲಿ ಅವಕಾಶ ಪಡೆದ ಬೈಂದೂರಿನ ಯುವತಿ
ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಎಲ್ ಡಿ ಎಫ್ ನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಂಡ ಯೋಗಿ, ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿವೆ. ಅಂತಹ ಅಂಶಗಳಿಗೆ ಎಲ್ ಡಿ ಎಫ್ ನ ಮೃದು ಧೋರಣೆ ಸಲ್ಲದು ಎಂದು ಗುಡುಗಿದ್ದಾರೆ.
ಮುಸ್ಲಿಂ ಲೀಗ್-ಕಾಂಗ್ರೆಸ್ ಮೈತ್ರಿ ಕೇರಳದ ಸುರಕ್ಷತೆಗೆ ದ್ರೋಹವನ್ನುಂಟು ಮಾಡುತ್ತಿವೆ. ಪಿ ಎಫ್ ಐ, ಎಸ್ ಡಿ ಪಿ ಐ ಜೊತೆಗೆ ಎಲ್ ಡಿ ಎಫ್ ಕೇರಳಕ್ಕೆ ಮೋಸ ಮಾಡಿವೆ. ಕೇರಳದಲ್ಲಿ ಯಾವ ರೀತಿಯ ಅಪಾಯಕಾರಿ ಚಟುವಟಿಕೆಗಳು ನಡೆಯುತ್ತಿವೆ ನಮಗೆ ಗೊತ್ತಿದೆ. ಅಂತಹ ದೇಶದ್ರೋಹ ಚಟುವಟಿಕೆಗಳ ನಿರ್ಮೂಲನೆಗೆ ನಾವು ಬದ್ದರಾಗಿದ್ದೇವೆ ಎಂದಿದ್ದಾರೆ.
ಓದಿ : ಭಾವುಕ ವಿದಾಯ: 132 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿ ಇತಿಹಾಸದ ಪುಟ ಸೇರಿದ ಮಿಲಿಟರಿ ಡೈರಿ