ಬೆಂಗಳೂರು: ದೇಶದ ಅತಿ ದೊಡ್ಡ ಆರ್‌ಒ ನೀರು ಶುದ್ಧೀಕರಣ ಸಂಸ್ಥೆ “ಕೆಂಟ್ ಆರ್‌ಒ ಸಿಸ್ಟಂಸ್’ ಹೊಸ ಪರಿಕಲ್ಪನೆಯೊಂದಿಗೆ ಅತ್ಯಾಧುನಿಕ ವಾಕ್ಯೂಮ್ ಕ್ಲೀನರ್‌ಗಳನ್ನು, ಏರ್ ಪ್ಯೂರಿಫೈಯರ್‌ಗಳನ್ನು ಹಾಗೂ ಅಡುಗೆ ಪರಿಕರಗಳನ್ನು ಬಿಡುಗಡೆ ಮಾಡಿದೆ.
ನಗರದ ಹೋಟೆಲಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಅಧ್ಯಕ್ಷ ಡಾ. ಮಹೇಶ್ ಗುಪ್ತಾ ಅವರು ಗುರುವಾರ ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಿ ಮಾತನಾಡಿ, “ಭಾರತೀಯ ಗ್ರಾಹಕರ ಮನೆಗಳಲ್ಲಿನ ಅವಶ್ಯಕತೆಗಳನ್ನು ಪರಿಗಣಿಸಿ ಹೆಪಾ ಸರಣಿ ಆಧಾರಿತ ಮೂರು ಮಾದರಿಯಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಹಾಗೂ ಮೂರು ಮಾದರಿಯಲ್ಲಿ ವಾಕ್ಯೂಮ್ ಕ್ಲೀನರ್‌ಗಳನ್ನು ಇಂದಿನಿಂದಲೇ ಮಾರುಕಟ್ಟೆ ಪರಿಚಯಿಸಲಾಗಿದೆ,’ ಎಂದರು.
“ಈಗಲೂ ನಮ್ಮ ಕೆಂಟ್ ಬ್ರ್ಯಾಂಡ್‌ನ ಆರೊವಾಟರ್ ಪ್ಯೂರಿಫೈಯರ್‌ಗಳು ಪ್ರತಿ ಮನೆಯ ಅಚ್ಚುಮೆಚ್ಚಿನ ಉತ್ಪನ್ನಗಳಾಗಿವೆ. ನಮ್ಮ ಸಂಸ್ಥೆ ಪ್ರತಿಯೊಬ್ಬ ನಾಗರಿಕರಿಗೂ ಅಗತ್ಯವಾಗಿ ಬೇಕಾಗಿರುವ ಶುದ್ಧೀಕರಿಸಿದ ನೀರು ಮತ್ತು ಗಾಳಿ ಒದಗಿಸುವ ಉತ್ಪನ್ನಗಳ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿದ್ದೇವೆ.
ಅತ್ಯಾಧುನಿಕ ಹಾಗೂ ಸ್ಮಾರ್ಟ್ ತಂತ್ರಜ್ಞಾನದೊಂದಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಸಾಮಾನ್ಯವಾಗಿ ಹೊರಗಿನ ಗಾಳಿಯಲ್ಲಿರುವ ಕಲ್ಮಶ ಮನೆಯೊಳಗೆ, ಕಚೇರಿಯೊಳಗೆ ಸೇರಿಕೊಳ್ಳುತ್ತದೆ. ಉಸಿರಾಟದ ಮೂಲಕ ಆ ಕಲುಷಿತ ಗಾಳಿಯನ್ನು ನಾವು ಸೇವಿಸುವುದರಿಂದ ನಾನಾ ರೀತಿ ಕಾಯಿಲೆಗಳಿಗೆ ಗುರಿಯಾಗುತ್ತೇವೆ.
ಏರ್ ಪ್ಯೂರಿಫೈಯರ್ ಮತ್ತು ವಾಕ್ಯೂಮ್ ಕ್ಲೀನರ್‌ಗಳಂತ ಆರೋಗ್ಯ ರಕ್ಷಕ ಉತ್ಪನ್ನಗಳಿಂದ ಮನೆಯನ್ನು ಕಲ್ಮಶರಹಿತವಾಗಿಸಬಹುದು ಹಾಗೂ ನೀವು ಮಲಗುವ ಹಾಸಿಗೆಯನ್ನು ಕೂಡ ಬ್ಯಾಕೀrರಿಯಾ ರಹಿತವಾಗಿಸಬಹುದು,’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಗುಪ್ತಾ ಅವರು, ಸ್ಟೆರ್ಲಿಂಗ್ ಪ್ಲಸ್, ಆಲ್ಕಲೈನ್ ವಾಟರ್ ಫಿಲ್ಟರ್, ಸೈಕ್ಲೊನಿಕ್ಸ್ ವಾಕ್ಯೂಮ್ ಕ್ಲೀನರ್ ಸರಣಿ, ಏರ್ ಪ್ಯೂರಿಫೈಯರ್, ಶೂ (ಕೆಳಭಾಗ) ಕ್ಲೀನರ್, ರೈಸ್ ಕುಕ್ಕರ್, ಪವರ್ ಗ್ರೈಂಡರ್, ಮಿನಿ ವಾಟರ್ ಸಾಫ್ಟನರ್ ಹಾಗೂ ಇನ್ನಿತರ ಉತ್ಪನ್ನಗಳನ್ನು ಪ್ರದರ್ಶಿಸಿದರು.