Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್ ಅನ್ನು 139ರೂ. ನಿಂದ 306 ರೂ. ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558 ರೂ.ನಿಂದ 1226 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
Related Articles
Advertisement
ಏಪ್ರಿಲ್ 16 ರಿಂದ ಆಗಸ್ಟ್ 15 ರವರೆಗೆ ಖರೀದಿಸಲಾದ ಟಿಕೆಟ್‌ಗಳ ಮೇಲೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ಈ ದಿನಾಂಕದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್ ಹಳೇ ಮೊತ್ತಕ್ಕೆ ಹಿಂತಿರುಗಲಿದೆ.
ಹೆಚ್ಚುವರಿಯಾಗಿ ಸಂಗ್ರಹಿಸಲಾದ ನಿಧಿಯನ್ನು ಯೋಜನೆ ವಿಸ್ತರಣೆಯ ಬಂಡವಾಳ ವೆಚ್ಚ ಪೂರೈಸಲು ಬಳಸಲಾಗುವುದು. ಅಲ್ಲದೇ, ಈ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ನಗದು ಹರಿವನ್ನು ಬಿಐಎಎಲ್‌ಗೆ ಇದು ಪೂರೈಸಲಿದೆ ಎಂದು ಹೇಳಿದರು.
ಭಾರತದಲ್ಲಿನ ವೈಮಾನಿಕ ಕ್ಷೇತ್ರದ ಅಪಾರ ಬೆಳವಣಿಗೆಗೆ ಅಗತ್ಯ ಸೌಕರ್ಯಗಳನ್ನು ಪೂರೈಸಲು 13,000 ರೂ. ಮೊತ್ತದ ಸಾಮರ್ಥ್ಯ ವಿಸ್ತರಣೆ ನಡುವೆ ಬಹಳ ಅಗತ್ಯವಾದ ಪರಿಹಾರವನ್ನು ಶುಲ್ಕಗಳಲ್ಲಿನ ಈ ಹೆಚ್ಚಳ ಬಿಈಎಎಲ್‌ಗೆ ಪೂರೈಸಲಿದೆ. ಬಿಐಎಎಲ್‌ನ ಬೃಹತ್ ವಿಸ್ತರಣಾ ಯೋಜನೆಗೆ ಮುಂದುವರಿದ ಬೆಂಬಲಕ್ಕಾಗಿ ಟಿಡಿಎಸ್‌ಎಟಿ, ಎಇಆರ್‌ಎ ಮತ್ತು ಕರ್ನಾಟಕ ಸರ್ಕಾರಗಳಿಗೆ ನಾವು ವಂದನೆ ಸಲ್ಲಿಸುತ್ತೇವೆ.
ಎಇಆರ್‌ಎ ಕಡ್ಡಾಯ ಮಾಡಿರುವಂತಹ ಈ ನಾಲ್ಕು ತಿಂಗಳಲ್ಲಿ ಯುಡಿಎಫ್ ಹೆಚ್ಚಳದಿಂದ ಬರುವ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುವುದು. ಕೈಗೊಂಡಿರುವ ಮೂಲ ಸೌಕರ್ಯ ವಿಸ್ತರಣೆಗೆ ಮಾತ್ರ ಈ ನಿಧಿ ಬಳಸಲಾಗುವುದು ಎಂದು ತಿಳಿಸಿದರು.