ತುಮಕೂರು: ಕೆಂಪೇಗೌಡರ ವಂಶಸ್ಥರು ಮತ್ತು ಕೆಂಪೇಗೌಡರು ಕನ್ನಡ ನಾಡಿಗೆ ನೀಡಿದಕೊಡುಗೆ ಅಪಾರ. ಒಂದು ಪಟ್ಟಣವನ್ನುಕಟ್ಟುವ ಬಗೆಯನ್ನು ಕುರಿತು ಪೂರ್ವಾಲೋಚನೆ ಮಾಡಿ ಕೋಟೆ ಹಾಗೂ ಪೇಟೆ ಕಟ್ಟುವುದರ ಮೂಲಕ ಎಲ್ಲ ಜನ ಸಮುದಾಯಗಳಿಗೆ ಆಶ್ರಯವನ್ನು ನೀಡಿದ್ದು ಐತಿಹಾಸಿಕ ಸತ್ಯಎಂದು ಇತಿಹಾಸಕಾರ ಡಾ. ತಲಕಾಡು ಚಿಕ್ಕರಂಗೇಗೌಡರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠವುಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ512ನೇಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು,ಬೆಂಗಳೂರು ಕೋಟೆಯು ದಕ್ಷಿಣ ಭಾರತದಕೇಂದ್ರವನ್ನಾಗಿ ಮಾಡುವ ಮುಖೇನ ಬೆಂಗಳೂರು ನಗರಕ್ಕೆ ಸಾಂಸ್ಕೃತಿಕ ಮಹತ್ವವನ್ನುಕೆಂಪೇಗೌಡರು ತಂದುಕೊಟ್ಟರು.
ಕೆಂಪೇಗೌಡರ ಶಾಸನಗಳ ಗಂಭೀರ ಅಧ್ಯಯನನಡೆಯಬೇಕಿದೆ. ಅವರ ಶಾಸನಗಳ ಅಧ್ಯಯನದಿಂದ ಕನ್ನಡ ನಾಡು, ನುಡಿ ಹಾಗೂಜನಸಮುದಾಯಕ್ಕೆ ಅವರು ನೀಡಿದ ಅಪಾರಕೊಡುಗೆ ಅರ್ಥಮಾಡಿಕೊಳ್ಳಬಹುದಾಗಿದೆ.ತಮ್ಮ ಇಳಿ ವಯಸ್ಸಿನಲ್ಲಿ ರಣದುಲ್ಲಾಖಾನ್‌ಹಾಗೂ ಶಹಾಜಿಯನ್ನು ಸೋಲಿಸುವ ಮುಖೇನಕನ್ನಡ ನಾಡನ್ನು ಸಂರಕ್ಷಿಸಿ, ಆಳುವ ರಾಜರಿಗೆಮಾದರಿಯನ್ನೊದಗಿಸಿದ್ದಾರೆ ಎಂದರು.
ಸಮಾಜ ಸುಧಾರಕ: ವಿಶ್ವವಿದ್ಯಾನಿಲಯದಕುಲಸಚಿವ ಪೊ›. ಕೆ. ಶಿವಚಿತ್ತಪ್ಪ ಮಾತನಾಡಿ,ಕೆಂಪೇಗೌಡರು ಬೆಂಗಳೂರು ನಗರದ ನಿರ್ಮಾತೃಗಳಷ್ಟೆ ಅಲ್ಲದೆ ಸಮಾಜ ಸುಧಾರಕರೂಆಗಿದ್ದಾರೆ. ಬೆಂಗಳೂರು ನಗರದಲ್ಲಿ ವೃತ್ತಿಆಧಾರಿತ ಮತ್ತು ವ್ಯಕ್ತಿ ಆಧಾರಿತ ಪೇಟೆಗಳನ್ನುನಿರ್ಮಿಸುವುದರ ಜೊತೆಗೆ ಕೆರೆ ಕಟ್ಟೆಗಳನ್ನುಉದ್ಯಾನವನ ನಿರ್ಮಿಸಿದ್ದಾರೆ. ನಾಡಪ್ರಭುಕೆಂಪೇಗೌಡರು ದೂರದೃಷ್ಟಿಯುಳ್ಳಅರ್ಥಶಾಸ್ತ್ರಜ್ಞರು ಹಾಗೂ ಸುಖೀರಾಜ್ಯದಪರಿಕಲ್ಪನೆಯನ್ನು ಸಾಕಾರಗೊಳಿಸಿದವರೂಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ವಿಶ್ವವಿದ್ಯಾನಿಲಯದ ವಿದ್ಯಾವಿಷಯಕಪರಿಷತ್ ಹಾಗೂ ಸಿಂಡಿಕೇಟ್ ಸದಸ್ಯರು,ಪರೀûಾಂಗ ಕುಲಸಚಿವ ಪೊ›. ನಿರ್ಮಲ್‌ರಾಜ್, ಸಲಹಾ ಸಮಿತಿಯ ಸದಸ್ಯ ಪೊ›.ಪಿ.ಪರಮಶಿವಯ್ಯ , ಡಾ. ಡಿ. ಸುರೇಶ್,ಪ್ರಾಂಶುಪಾಲರು, ಅಧ್ಯಾಪಕರು ಹಾಗೂಅಧ್ಯಾಪಕೇತರರು ಇದ್ದರು.