ಮಲ್ಪೆ: ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವಿವಿಧ ಕಾಮಗಾರಿಗಳನ್ನು ಶಾಸಕ ಕೆ. ರಘುಪತಿ ಭಟ್ ಪರಿಶೀಲನೆ ನಡೆಸಿದರು.
ಅಲ್ಪಸಂಖ್ಯಾಕರ ಕಲ್ಯಾಣ ಯೋಜನೆಯಡಿ ಕೆಮ್ಮಣ್ಣು ಚರ್ಚ್ ಬಳಿಯಿಂದ ಅಮೀರ್ ಸಾಹೇಬ್ ಹಾಗೂ ರಾಕಿ ಡಿಸೋಜಾ ಅವರ ಮನೆ ಬಳಿ ರಸ್ತೆ ಅಭಿವೃದ್ಧಿ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ರಸ್ತೆ ಕಾಮಗಾರಿಗಳಾದ ಕೆಮ್ಮಣ್ಣು ಹಿಂದೂ ಶಾಲೆ ಹಿಂಬದಿಯಿಂದ ವೆಂಕಮ್ಮ ಟೀಚರ್ ಮನೆ ಬಳಿವರೆಗೆ, ಕೆಮ್ಮಣ್ಣು ಗ್ರಾಮ ಪಂಚಾಯತ್ ಎದುರುಗಡೆಯ ಗಜಾನನ ರಸ್ತೆಯಿಂದ ಗುಜ್ಜರ್‌ಬೆಟ್ಟುವರೆಗೆ ರಸ್ತೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು.
ಮಳೆಗಾಲ ಪ್ರಾರಂಭಗೊಂಡಿದ್ದರಿಂದ ತಿಂಗಳ ಅಂತ್ಯದ ಒಳಗೆ ತುರ್ತಾಗಿ ಕಾಮಗಾರಿಯನ್ನು ಗುಣಮಟ್ಟ ಕಾಯ್ದುಕೊಂಡು ಪೂರ್ಣಗೊಳಿಸುವಂತೆ ಅಭಿಯಂತರರು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ಸುಲೋಚನಾ, ಕೆಮ್ಮಣ್ಣು ಗ್ರಾ.ಪಂ. ಅಧ್ಯಕ್ಷ ಫೌಜಿಯಾ ಸಾಧಿಕ್, ಗ್ರಾ.ಪಂ. ಸದಸ್ಯ ಶ್ರೀಧರ್, ಸ್ಥಾನೀಯ ಸಮಿತಿ ಅಧ್ಯಕ್ಷ ರವಿಚಂದ್ರ ಸನಿಲ್, ಕೆ.ಆರ್. ಐ.ಡಿ.ಎಲ್. ಅಭಿಯಂತರ ಹೇಮಂತ್, ಪಿಡಬ್ಲ್ಯೂ ಡಿ ಕಿರಿಯ ಅಭಿಯಂತರ ಗಿರೀಶ್ ಮತ್ತು ಊರ ಪ್ರಮುಖರು ಹಾಗೂ ಹಿರಿಯರು ಉಪಸ್ಥಿತರಿದ್ದರು.