Advertisement

Kejriwal ತೂಕ: ಆಪ್‌, ತಿಹಾರ್‌ ಜೈಲಾಡಳಿತ ನಡುವೆ ಜಟಾಪಟಿ

12:50 AM Jul 16, 2024 | Team Udayavani |

ಹೊಸದಿಲ್ಲಿ: ಜೈಲಲ್ಲಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತೂಕದಲ್ಲಿ 2 ಕೆ.ಜಿ ಇಳಿಕೆಯಾಗಿದೆ. ಆದರೆ ಈ ಬಗ್ಗೆ ಆಪ್‌ ತಪ್ಪು ಮಾಹಿತಿ ನೀಡುತ್ತಿದೆ ಎಂದು ತಿಹಾರ್‌ ಜೈಲು ಅಧಿಕಾರಿಗಳು ಹೇಳಿದ್ದಾರೆ. ಆಪ್‌ ನಾಯಕ ಸಂಜಯ್‌ ಸಿಂಗ್‌, ಕೇಜ್ರಿವಾಲ್‌ ತೂಕದಲ್ಲಿ 8.5ಕೆ.ಜಿ. ಇಳಿಕೆಯಾಗಿದೆ. ಅವರ ರಕ್ತ ದಲ್ಲೂ ಸಕ್ಕರೆ ಅಂಶ ಕಡಿಮೆಯಾಗುತ್ತಿದ್ದು, ಗಂಭೀರ ಕಾಯಿಲಿಗೆ ತುತ್ತಾಗುವ ಭೀತಿ ಇದೆ. ಕೇಂದ್ರವೇ ಇದಕ್ಕೆ ಪಿತೂರಿ ರೂಪಿಸಿದೆ ಎಂದು ಆರೋಪಿಸಿದ ಬೆನ್ನಲ್ಲೇ ಆಡಳಿತ ಈ ಸ್ಪಷ್ಟನೆ ನೀಡಿದೆ. ಮೊದಲ ಬಾರಿ ಜೈಲಿಗೆ ಬಂದಾಗ ಎ.1ರಂದು ಅವರ ತೂಕ 65ಕೆ.ಜಿ. ಆಗಿತ್ತು, ಎ.29ರ ವೇಳೆಗೆ 66 ಕೆ.ಜಿ. ಆಗಿದ್ದರು. 2ನೇ ಬಾರಿ ಜೈಲಿಗೆ ಬಂದಾಗ ಜೂ.2ರಂದು 63.5ಕೆ.ಜಿ. ತೂಕವಿದ್ದ ಅವರು ಜು.14ರ ವೇಳೆಗೆ 61.5ಕೆ.ಜಿ. ಆಗಿದ್ದಾರೆ. 2 ಕೆ.ಜಿ. ಮಾತ್ರ ತೂಕ ಇಳಿಕೆಯಾಗಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next