ನವದೆಹಲಿ:ದೆಹಲಿಯ ವಾಯು ಮಾಲಿನ್ಯ ತೀವ್ರ ಕಲುಷಿತಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿರುವ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ದೊಡ್ಡ ಪೋಸ್ಟರ್ ಅನ್ನು ಹಾಕಿರುವುದು ಉಭಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹರಿದ ಚಪ್ಪಲಿ ಧರಿಸಿ ಬಂದಿದ್ದ ಹುಡುಗ ಇದೀಗ ಸ್ಟಾರ್ ಪ್ಲೇಯರ್: ಬುಲ್ಸ್ ಗೆ ಬಲ ತುಂಬಿದ ಭರತ್
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 450ರ ಗಡಿ ದಾಟಿದ್ದು, ಇದು ತೀವ್ರ ಅಪಾಯಕಾರಿ ಮಟ್ಟ ತಲುಪಿದಂತಾಗಿದೆ. ರಾಜಧಾನಿಯ ವಾಯುಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದ್ದಕ್ಕೆ ಬೃಹತ್ ಪೋಸ್ಟರ್ ನಲ್ಲಿ ಕೇಜ್ರಿವಾಲ್ ಮತ್ತು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಫೋಟೋ ಬಳಸಲಾಗಿದ್ದು, ಮೊದಲ ಹಿಟ್ಲರ್…ಕೇಜ್ರಿವಾಲ್ ಎರಡನೇ ಹಿಟ್ಲರ್. ದೆಹಲಿಯನ್ನು ಗ್ಯಾಸ್ ಚೇಂಬರ್ ನ್ನಾಗಿ ಪರಿವರ್ತಿಸಿದ ಎರಡನೇ ಹಿಟ್ಲರ್ ಕೇಜ್ರಿವಾಲ್ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
“ದೆಹಲಿಯ ಜನರು ವಾಯು ಮಾಲಿನ್ಯದಿಂದ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಪ್ರವಾಸದಲ್ಲಿದ್ದಾರೆ ಎಂದು ಎಎನ್ ಐ ಜೊತೆ ಮಾತನಾಡುತ್ತ ಆಕ್ರೋಶವ್ಯಕ್ತಪಡಿಸಿರುವ ಬಗ್ಗಾ, ಕೇಜ್ರಿವಾಲ್ ದೆಹಲಿಯನ್ನು ಗ್ಯಾಸ್ ಚೇಂಬರ್ ನ್ನಾಗಿ ಪರಿವರ್ತಿಸಿದ್ದು, ಜನರು ವಾಯು ಮಾಲಿನ್ಯದಿಂದ ಸಾಯುವಂತಾಗಿದ್ದು, ಕೇಜ್ರಿವಾಲ್ ಮಾತ್ರ ರಾಜಕೀಯ ಪ್ರವಾಸದಲ್ಲಿದ್ದಾರೆ ಎಂದು ದೂರಿದ್ದಾರೆ.