Advertisement
ಶಾಸಕರಾಗಿರುವ ಆತಿಶಿ ಮಲೇìನಾ, ಸೌರಭ್ ಭಾರದ್ವಾಜ್ ಅವರನ್ನು ಸಚಿವ ಸ್ಥಾನಕ್ಕೆ ನೇಮಿಸುವ ಬಗ್ಗೆ ಅರವಿಂದ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್‌ಗೆ ಶಿಫಾರಸು ಮಾಡಿದ್ದಾರೆ. ಆತಿಶಿ ಅವರು ಕೇಜ್ರಿವಾಲ್ ಸಂಪುಟದ ಮೊದಲ ಮಹಿಳಾ ಸಚಿವೆಯೂ ಆಗಲಿದ್ದಾರೆ. ಆದರೆ, ನಂ.2 ಸ್ಥಾನದಲ್ಲಿ ಇದ್ದ ಸಿಸೋಡಿಯಾ ಅವರು ಹೊಂದಿದ್ದ ಉಪಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡುವ ಬಗ್ಗೆ ಯಾವ ನಿರ್ಧಾರವನ್ನೂ ಕೇಜ್ರಿವಾಲ್ ಪ್ರಕಟಿಸಿಲ್ಲ.
ಸೌರಭ್, ಆತಿಶಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸು ವವರೆಗೂ, ಸಚಿವ ಕೈಲಾಶ್ ಗೆಹೊÉàಟ್ ಅವರಿಗೆ ಹೆಚ್ಚುವರಿ ಯಾಗಿ ಹಣಕಾಸು, ಲೋಕೋಪಯೋಗಿ ಹಾಗೂ ಕೆಲವು ಖಾತೆಗಳನ್ನು ನೀಡಲಾಗಿದೆ. ಸಚಿವ ರಾಜಕುಮಾರ್ ಆನಂದ್ ಅವರಿಗೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಇತರ ಖಾತೆಗಳ ಹೆಚ್ಚುವರಿ ಹೊಣೆಯನ್ನು ಈಗಾಗಲೇ ನೀಡಲಾಗಿದೆ.
Related Articles
Advertisement
ದಿಲ್ಲಿಯಲ್ಲಿ ಆಪ್ ಸರಕಾರ ದಿಂದ ನಡೆಯುತ್ತಿರುವ ಒಳ್ಳೆಯ ಕೆಲಸಗಳನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರ ಬಂಧನವಾಗಿದೆ. ಅವರು ಬಿಜೆಪಿ ಸೇರಿದರೆ ನಾಳೆಯೇ ಬಂಧಮುಕ್ತವಾಗಲಿದ್ದಾರೆ.-ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ