Advertisement

Kejriwal; ಜೈಲ್‌ ಕಾ ಜವಾಬ್‌ ಓಟ್‌ ಸೇ: ಆಪ್‌ ಹೊಸ ಕ್ಯಾಂಪೇನ್‌

12:53 PM Apr 09, 2024 | Team Udayavani |

ಹೊಸದಿಲ್ಲಿ: ಅರವಿಂದ್‌ ಕೇಜ್ರಿವಾಲ್‌ಗೆ ಬೆಂಬಲ ನೀಡಲು ಹಾಗೂ ಲೋಕಸಭೆ ಚುನಾವಣೆಗಾಗಿ ಆಪ್‌ “ಜೈಲ್‌ ಕಾ ಜವಾಬ್‌ ಓಟ್‌ ಸೇ'(ಮತಗಳ ಮೂಲಕ ಜೈಲಿಗೆ ಉತ್ತರ) ಅಭಿಯಾನವನ್ನು ಸೋಮವಾರ ಆರಂಭಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಪ್‌ನ ರಾಜ್ಯಸಭಾ ಎಂಪಿ ಸಂದೀಪ್‌ ಪಾಠಕ್‌ ಅವರು, “ದೊಡ್ಡ ಸಂಚಿನ ಭಾಗವಾಗಿ ಕೇಜ್ರಿವಾಲ್‌ರನ್ನು ಬಂಧಿಸಲಾಗಿದೆ. ಜೈಲ್‌ ಕಾ ಜವಾಬ್‌ ಓಟ್‌ ಸೇ ಅಭಿಯಾನದ ಭಾಗವಾಗಿ ಕಾರ್ಯಕರ್ತರು ಮತ್ತು ನಾಯಕರು ಆಪ್‌ ಸ್ಪರ್ಧಿಸಿರುವ ದಿಲ್ಲಿಯ 4 ಲೋಕಸಭೆ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು. ಜತೆಗೆ, “ನೀವು ಸರ್ವಾಧಿಕಾರವನ್ನು ಸೋಲಿಸಬೇಕು. ಮತದಾನ ಮಾಡುವ ವೇಳೆ ಕೇಜ್ರಿವಾಲ್‌ ಅವರ ಮುಖವನ್ನು ನೆನಪಿಸಿಕೊಂಡು ಹಕ್ಕು ಚಲಾಯಿಸಬೇಕು’ ಎಂದು ಮತದಾರರಿಗೆ ಕರೆ ನೀಡಿದ್ದಾರೆ.

ಕೇಜ್ರಿ ಪಿಎ, ಆಪ್‌ ಶಾಸಕ ವಿಚಾರಣೆ: ಈ ಮಧ್ಯೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪಿಎ ಬಿಭವ್‌ ಕುಮಾರ್‌ ಹಾಗೂ ಆಪ್‌ ಶಾಸಕ ದುರ್ಗೇಶ್‌ ಪಾಠಕ್‌ ಅವರನ್ನು ಇ.ಡಿ. ವಿಚಾರಣೆ ನಡೆಸಿದೆ. ಈ ಇಬ್ಬರನ್ನು ಇ.ಡಿ. ಈ ಹಿಂದೆಯೂ ವಿಚಾರಣೆಗೊಳಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next