Advertisement

ಎಲ್‌ಜಿ ಕಚೇರಿಯಲ್ಲಿ ಕೇಜ್ರಿ ಹೈಡ್ರಾಮಾ

09:18 AM Jun 13, 2018 | Team Udayavani |

ಹೊಸದಿಲ್ಲಿ: ತಮ್ಮ ಎರಡು ಬೇಡಿಕೆಗಳಿಗೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದು ಆರೋಪಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿದಂತೆ ಪ್ರಮುಖ ಆಪ್‌ ನಾಯಕರು ಗವರ್ನರ್‌ ಕಚೇರಿಯಲ್ಲಿ ಸೋಮವಾರ ಸಂಜೆಯಿಂದ ಆರಂಭಿಸಿದ್ದ ಧರಣಿ ಮಂಗಳವಾರವೂ ಮುಂದುವರಿದೆ. ಧರಣಿಗೆ ಸ್ಪಂದಿಸದ ಕಾರಣ, ಮಂಗಳವಾರ ಬೆಳಗ್ಗೆಯಿಂದ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

Advertisement

ಆಪ್‌ ಬೇಡಿಕೆಗಳೇನು?: ಕಳೆದ 4 ತಿಂಗಳಿಂದ ಕರ್ತವ್ಯಕ್ಕೆ ಗೈರಾಗಿರುವ ದಿಲ್ಲಿ ರಾಜ್ಯವ್ಯಾಪ್ತಿಯ ಎಲ್ಲಾ ಐಎಎಸ್‌ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಬೇಕು. ಜತೆಗೆ, “ಮನೆ ಬಾಗಿಲಿಗೆ ಪಡಿತರ’ ಯೋಜನೆಗೆ ಒಪ್ಪಿಗೆ ನೀಡಬೇಕು ಎಂಬುದು ಸರ್ಕಾರದ ಬೇಡಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next