Advertisement

Keerthy Suresh: ಅನಿರುದ್ಧ್‌ ಜೊತೆ ʼಮಹಾನಟಿʼ ಕೀರ್ತಿ ಮದುವೆ? ಮೌನ ಮುರಿದ ನಟಿಯ ತಂದೆ

06:18 PM Sep 16, 2023 | Team Udayavani |

ಚೆನ್ನೈ: ಬಹುಭಾಷಾ ನಟಿ ಕೀರ್ತಿ ಸುರೇಶ್‌  ಅವರು ಮದುವೆ ವಿಚಾರ ಮತ್ತೆ ಸಿನಿವಲಯದಲ್ಲಿ ಸದ್ದು ಮಾಡಿದೆ. ಈ ಬಾರಿ ಖ್ಯಾತ ಮ್ಯೂಸಿಕ್‌ ಕಂಪೋಸರ್‌ ರೊಬ್ಬರ ಜೊತೆ ಅವರ ವಿವಾಹ ನಡೆಯಲಿದೆ ಎನ್ನುವ ಸುದ್ದಿಯೊಂದು ಭಾರೀ ವೈರಲ್‌ ಆಗಿದೆ.

Advertisement

ಕಾಲಿವುಡ್‌ ಸಿನಿಮಾರಂಗದ ಖ್ಯಾತ ಮ್ಯೂಸಿಕ್‌ ಡೈರೆಕ್ಟರ್‌ ಹಾಗೂ ಇತ್ತೀಚೆಗೆ ʼಜವಾನ್‌ʼ ಹಾಗೂ ʼಜೈಲರ್‌ʼ ಸಿನಿಮಾದ ಮೂಲಕ ಸಿನಿ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಅನಿರುದ್ಧ್ ರವಿಚಂದರ್ ಅವರೊಂದಿಗೆ ಕೀರ್ತಿ ಸುರೇಶ್‌ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದೆ.

ಈ ಸುದ್ದಿ ಹಬ್ಬುತ್ತಿದ್ದಂತೆ ನಟಿಯ ತಂದೆ ಕೀರ್ತಿ ಸುರೇಶ್ ಕುಮಾರ್ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

“ಈ ಸುದ್ದಿ ಸಂಪೂರ್ಣ ಆಧಾರಹಿತವಾಗಿದೆ. ಇದರಲ್ಲಿ ಒಂದು ತುಣುಕೂ ಸತ್ಯವಿಲ್ಲ. ಇನ್ನೂ ಅನೇಕ ಲಿಂಕ್-ಅಪ್‌ಗಳ ಸುದ್ದಿಗಳಿವೆ ಮತ್ತು ಯಾರಾದರೂ ಅವಳ ಬಗ್ಗೆ ಇಂತಹ ಸುದ್ದಿಯನ್ನು ಹಾಕುತ್ತಿರುವುದು ಇದೇ ಮೊದಲಲ್ಲ” ಎಂದು ʼಓಟಿಟಿ ಪ್ಲೇʼಗೆ ಹೇಳಿದ್ದಾರೆ.

ಇನ್ನು ನಟಿ ಕೀರ್ತಿ ಸುರೇಶ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅನಿರುದ್ಧ್‌ ಅವರು ನನ್ನ ಒಳ್ಳೆಯ ಸ್ನೇಹಿತ. ಇದು ಸುಳ್ಳು ಸುದ್ದಿ” ಎಂದು ಹೇಳುವ ಮೂಲಕ ಯುವ ಸಂಗೀತಗಾರನೊಂದಿಗಿನ ವಿವಾಹದ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

Advertisement

ಇದೇ ಮೊದಲ ಬಾರಿಯಲ್ಲ.. ಇನ್ನು ನಟಿ ಕೀರ್ತಿ ಸುರೇಶ್‌ ಅವರ ವಿವಾಹದ ಬಗ್ಗೆ ವದಂತಿ ಹಬ್ಬಿರುವುದು ಇದೇ ಮೊದಲ ಬಾರಿ ಏನಲ್ಲ. ಈ ಹಿಂದೆ ದುಬೈ ಮೂಲದ ಉದ್ಯಮಿ ಫರ್ಹಾನ್ ಎಂಬವರ ಜೊತೆ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋ ವೈರಲ್‌ ಆಗುವುದರ ಜೊತೆ ನಟಿ ಅವರೊಂದಿಗೆ ವಿವಾಹ ವಾಗಲಿದ್ದಾರೆ ಎನ್ನುವುದು ಕೂಡ ವೈರಲ್‌ ಆಗಿತ್ತು. ಆದರೆ ಆ ಬಳಿಕ ನಟಿ ಆತ ನನ್ನ ಸ್ನೇಹಿತ ಎಂದಿದ್ದರು. ಇದಲ್ಲದೆ  ನಾನು ರಿಲೇಷನ್‌ ಶಿಪ್‌ ನಲ್ಲಿದ್ದೇನೆ. ಶೀಘ್ರದಲ್ಲಿ  ಅದರ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದಿದ್ದರು.

ಕೀರ್ತಿ ಮತ್ತು ಅನಿರುದ್ಧ್ ʼರೆಮೋʼ, ʼತಾನಾ ಸೇರ್ದ ಕೂಟಂʼ, ʼಅಜ್ಞಾತವಾಸಿʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ತುಂಬಾ ಆತ್ಮೀ ಸ್ನೇಹಿತರಾಗಿದ್ದಾರೆ. ಈ ಹಿಂದೆಯೂ ಇಬ್ಬರ ಮದುವೆ ವದಂತಿ ಹಬ್ಬಿತ್ತು.

ಅನಿರುದ್ಧ್ ಅವರ ʼಜವಾನ್ʼ ಚಿತ್ರದ ಬ್ಲಾಕ್ ಬಸ್ಟರ್ ಹಾಡು ʼಚಲೇಯಾʼಗೆ ಹಾಡಿಗೆ ಅಟ್ಲಿ ಪತ್ನಿ ಪ್ರಿಯಾ ಜೊತೆ ಕೀರ್ತಿ ಸುರೇಶ್ ರೀಲ್ಸ್‌ ಮಾಡಿದ್ದು ವೈರಲ್‌ ಆಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next