Advertisement

ಹಿಂದೂ-ಮುಸ್ಲಿಂ ಬೇಧ ಮಾಡುವವರನ್ನು ಮನೆಯಲ್ಲಿ ಕುಳ್ಳಿರಿಸಿ: ಜನಾರ್ದನ ರೆಡ್ಡಿ

06:06 PM Feb 11, 2023 | Team Udayavani |

ಗಂಗಾವತಿ: ಗಂಗಾವತಿ ನಗರ ಮತ್ತು ಕ್ಷೇತ್ರದಾದ್ಯಂತ ಕೆಲವರು ಹಿಂದೂ-ಮುಸ್ಲಿಂ ಬೇಧಭಾವ ಮಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಂಡು ಗೆಲುವು ಪಡೆದು ಸ್ವಾರ್ಥ ಸಾಧಿಸುತ್ತಿದ್ದು ಕ್ಷೇತ್ರದ ಮತದಾರರು ಅಂತವರನ್ನು ಮನೆಯಲ್ಲಿ ಕುಳ್ಳಿರಿಸುವ ಮೂಲಕ ಎಲ್ಲರಿಗೂ ಆದ್ಯತೆ ನೀಡುವವರನ್ನು ಗೆಲ್ಲಿಸಿ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡುವಂತೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನವಿ ಮಾಡಿದರು.

Advertisement

ಅವರು ನಗರದ ಸಂತೆಬಯಲು-ಮಹೆಬೂಬನಗರದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ನಾನು ಕೇವಲ ಅಧಿಕಾರದ ಆಸೆಗಾಗಿ ಪಕ್ಷ ಸ್ಥಾಪಿಸಿ ಚುನಾವಣೆಗೆ ಬಂದಿಲ್ಲ. 12 ವರ್ಷಗಳ ಕಾಲ ವನವಾಸ ಮುಗಿಸಿದ ನಂತರ ದೃಢ ಸಂಕಲ್ಪ ಮಾಡಿ ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದು. ಗಂಗಾವತಿ ಜನತೆಯ ನಡುವೆ ಮೊದಲಿಂದಲೂ ಯಾವುದೇ ರೀತಿಯ ವೈಮನಸ್ಸುಗಳು ಇರಲಿಲ್ಲ.ಇತ್ತೀಚೆಗೆ ಕೆಲ ಸ್ವಾರ್ಥ ರಾಜಕೀಯ ವ್ಯಕ್ತಿಗಳು ಜನತೆಯ ಮನಸ್ಸುಗಳನ್ನು ಒಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತಾವೆಲ್ಲರೂ ಒಟ್ಟಾಗಿ ನನ್ನ ಗೆಲುವಿಗೆ ಅಧಿಕಾರಕ್ಕೆ ಬಂದ ಮೊದಲ ತಿಂಗಳ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಕೇಸ್ ಗಳನ್ನು ಹೊಡೆದು ಹಾಕಿ ನಮ್ಮಲ್ಲಿ ಮತ್ತೆ ಅನ್ಯೂನತೆ ಮೂಡಿಸುತ್ತೆನೆ. ಬಡವರ ಮನೆಗಳಿಗೆ ಹಕ್ಕುಪತ್ರದ ತೊಂದರೆ ಇದ್ದು ಎಲ್ಲಾರಿಗೂ ಮನೆಗಳ ಪಟ್ಟ ಸಮೇತ ಖಾತೆ, ಮುಟೇಷನ್ ಗಳನ್ನು ಕೊಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

5 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೇಲರಿಂಗ್ ತರಭೇತಿ ಕೇಂದ್ರವನ್ನು ನಿರ್ಮಾಣ ಮಾಡಿ ಎಲ್ಲಾ ಮಹಿಳೆಯರು ಸ್ವಾಭಿಮಾನದ ದುಡಿದು ಅರ್ಥಿಕವಾಗಿ ಸಭಲರಾಗಿ ಗರ್ವದಿಂದ ಜೀವನ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ. ನನ್ನನ್ನು ನಂಬಿ ಗೆಲ್ಲಿಸಿ ನಾನು ಇಡೀ ಉತ್ತರ ಕರ್ನಾಟಕದಲ್ಲಿ ಒಟ್ಟು 30-40 ಶಾಸಕರನ್ನು ಗೆಲ್ಲಿಸಿ ತಂದು ಇಡೀ ಸರ್ಕಾರ ನನ್ನ ಕ್ಷೇತ್ರಕ್ಕೆ ಬರುವಂತೆ ಮಾಡುತ್ತೇನೆ. ಇಲ್ಲಿ ಗೆದ್ದ ನಂತರ ನಾನು ಬಳ್ಳಾರಿ ಗೆ ಹೋಗುತ್ತೇನೆ ಎಂದು ಸುಳ್ಳು ಕಥೆ ಹೇಳುವವರನ್ನು ನಂಬದಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಳ್ಳಾರಿಯ ಮುಸ್ಲಿಂ ಧರ್ಮಗುರುಗಳು, ರೆಡ್ಡಿ ಅಪ್ತ ಮೆಹಬೂಬ್ ಅಲಿಖಾನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next