Advertisement
ಆಧಾರ್ ಕಳೆದು ಹೋಗಿದೆ. ಏನು ಮಾಡಬೇಕು?ಆಧಾರ್ ಕಾರ್ಡ್ ಕಳೆದುಹೋಗಿದ್ದರೆ, ಮೊದಲು ಮಾಡಬೇಕಾದ ಕೆಲಸ ನಕಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡುವುದು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿಧಾನ ಮಾಡಲೇಬಾರದು. ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ನಕಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ನಿಮ್ಮ ಮನೆಯ ಹತ್ತಿರದ ನೋಂದಣಿ ಕೇಂದ್ರ, ಆಧಾರ್ ಸಹಾಯವಾಣಿಗೆ ಅರ್ಜಿ ಸಲ್ಲಿಕೆ ಮಾಡಿ.
ಆಧಾರ್ ನಂಬರ್ ಅಥವಾ ಅದರಲ್ಲಿನ ಮಾಹಿತಿಗಳನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಉತ್ತಮ. ಇದಕ್ಕಾಗಿ ಎಂಆಧಾರ್ ಎಂಬ ಆ್ಯಪ್ ಇದೆ. ಡೌನ್‌ಲೋಡ್ ಮಾಡಿಕೊಂಡು ಲಾಕ್ ಮಾಡಬಹುದು. ಆಧಾರ್ ಒಟಿಪಿ ಶೇರ್ ಮಾಡಬೇಡಿ
ಆಧಾರ್ ಧೃಢೀಕರಣಕ್ಕಾಗಿ ಒಟಿಪಿ ತುಂಬಾ ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಯಾರೇ ಕೇಳಿದರೂ ಆಧಾರ್ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
Related Articles
ವಿಳಾಸ ದೃಢೀಕರಣಕ್ಕಾಗಿ ನೀವು ಆಧಾರ್ ಫೋಟೋ ಕಾಪಿ ಕೊಡುತ್ತಿದ್ದೀರಾ? ಇನ್ನು ಮುಂದೆ ಕೊಡಬೇಡಿ. ಈ ಫೋಟೋಕಾಪಿಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ಹಂಚಿಕೊಳ್ಳಬೇಡಿ. ಇದಕ್ಕೆ ಬದಲಾಗಿ ವಿಐಡಿ ಅಥವಾ ಮಾಸ್ಕ್ ಆಧಾರ್ ಬಳಸಿ.
Advertisement
ದೂರು ಕೊಡಿಆಧಾರ್ ಕಾರ್ಡ್ ಕಳೆದು ಹೋದ ತತ್‌ಕ್ಷಣವೇ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡಿ. ಇದರಿಂದ ದುರ್ಬಳಕೆ ತಪ್ಪಿಸಬಹುದು. ವಿಐಡಿ ಬಳಸಿ
ಆಧಾರ್ ಸಂಖ್ಯೆ ಕೇಳಿದರೆ, ನಿಜವಾದ ಆಧಾರ್ ಸಂಖ್ಯೆ ನೀಡದೇ, ವಚ್ಯುìವಲ್ ಐಡಿ ಸಿಗುತ್ತದೆ. ಇದನ್ನು ಕೊಡಿ. ಇದು ಆಧಾರ್ ವೆಬ್‌ಸೈಟ್‌ನಲ್ಲಿ ಸಿಗುತ್ತದೆ.