Advertisement

Dhruva Sarja; ಅಬುಧಾಬಿಯಲ್ಲಿ ‘ಕೆಡಿ’ ಟ್ರೇಲರ್‌

01:06 PM Jul 11, 2024 | Team Udayavani |

ಪ್ರೇಮ್‌ ನಿರ್ದೇಶನದಲ್ಲಿ ಧ್ರುವ ಸರ್ಜಾ ನಾಯಕರಾಗಿ ನಟಿಸುತ್ತಿರುವ “ಕೆಡಿ’ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವುದಾಗಿ ಘೋಷಿಸಿಕೊಂಡಿದೆ. ಈಗ ಚಿತ್ರತಂಡ ಮತ್ತೂಂದು ಅಪ್‌ಡೇಟ್‌ ನೀಡಿದೆ. ಅದು ಟ್ರೇಲರ್‌ ಕುರಿತಾದ್ದು.

Advertisement

ಚಿತ್ರದ ಸ್ಪೆಷಲ್‌ ಟ್ರೇಲರ್‌ವೊಂದು ಸ್ಪೆಷಲ್‌ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಯಾಗಲಿದೆಯಂತೆ. ಅದು ಅಬುಧಾಬಿ ಯಲ್ಲಿ. ಸೆಪ್ಟೆಂಬರ್‌ 6-7 ರಂದು ಐಫಾ ಉತ್ಸವಂ ಅವಾರ್ಡ್‌ ಫ‌ಂಕ್ಷನ್‌ ನಡೆಉಲಿದ್ದು, ಆ ವೇದಿಕೆಯಲ್ಲಿ “ಕೆಡಿ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ ಯಂತೆ. ಈ ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾದ ಟ್ರೇಲರ್‌ ಅನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲೇ ಬಿಡುಗಡೆ ಮಾಡುತ್ತಿದೆ ಚಿತ್ರತಂಡ.

ಇನ್ನು,ಚಿತ್ರದ ಮೊದಲ ಟೀಸರ್‌ ವರಮಹಾಲಕ್ಷ್ಮೀ ಹಬ್ಬ (ಆಗಸ್ಟ್‌ 16)ಕ್ಕೆ ಮುಂಬೈನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ಹಾಡು ಆಗಸ್ಟ್‌ 25ಕ್ಕೆ ಹೈದರಾಬಾದ್‌ನಲ್ಲಿ ರಿಲೀಸ ಮಾಡಲು ಚಿತ್ರತಂಡ ಮುಂದಾಗಿದೆ. ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಆ ನಿಟ್ಟಿನಲ್ಲಿ ಚಿತ್ರತಂಡ ತಯಾರಿ ನಡೆಸುತ್ತಿದೆ. ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ. ಚಿತ್ರದಲ್ಲಿ ಆ್ಯಕ್ಷನ್‌, ಸೆಂಟಿಮೆಂಟ್‌, ರೆಟ್ರೋ ಎಲ್ಲವೂ ಇದೆ ಎನ್ನುವುದು ಪ್ರೇಮ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next