Advertisement

ಕೆ.ಸಿ.ವ್ಯಾಲಿ ನೀರಿನ ರಾಜಕೀಯ ಬಿಡಲಿ

06:19 AM May 18, 2020 | Lakshmi GovindaRaj |

ಚಿಂತಾಮಣಿ: ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ ಶಾಸಕ ಸುಧಾಕರ್‌ ಬೆಂಬಲಿಗರು ಜನರಿಗೆ ತಪ್ಪು ಮಾಹಿತಿ ನೀಡುವುದರ ಮೂಲಕ ನೀರಿನ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಮಾಹಿತಿ ಇಲ್ಲದೇ ಬುದ್ಧಿಹೀನರಂತೆ  ಮಾತನಾ ಡು ತ್ತಿದ್ದಾರೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿಗರು ದೂರಿದರು.

Advertisement

ತಾಲೂಕಿನ ಕುರಟಹಳ್ಳಿ ಕೆರೆಯಲ್ಲಿ ಹಮ್ಮಿ ಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಬಲಿಗರು, ಶಾಸಕರು ಕುರುಟಹಳ್ಳಿ ಕೆರೆಗೆ ನೀರು ಬಿಡಬಾರದೆಂದು ಹೇಳಿಲ್ಲ. ಬದಲಾಗಿ ಕುರುಟಹಳ್ಳಿ ಕೆರೆ ಸ್ವತ್ಛಗೊಳಿಸಿ ಕೆರೆ ಕೋಡಿ ಸರಿಪಡಿಸಿದ ಬಳಿಕ ನೀರು ಬಿಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ ಹೊರತು ನೀರು ಬಿಡಬೇಡಿ ಎಂದು ಹೇಳಿಲ್ಲ ಎಂದರು.

ಕಳೆದ ಎರಡು ದಿನಗಳು  ಕುರುಟಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ತಿಳಿದು ಶಾಸಕರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಜಾಲಿ ಮರಗಳ ಮುಳ್ಳಿನ ಕೊಂಪೆಗಳು ತುಂಬಿ ತುಳು ಕುತ್ತಿದ್ದನ್ನು ಕಂಡು ಹಾಗೂ ಕೆರೆ ಕೋಡಿ ಒಡೆದಿರುವು ದನ್ನು ನೋಡಿ  ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆರೆ ಸ್ವತ್ಛಗೊಳಿಸಿ ನೀರು ಬಿಡುವಂತೆ ಸೂಚನೆ ನೀಡಿ ದ್ದರು ಎಂದರು.

ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಕರೆ ಸ್ವತ್ಛತೆ ಹಾಗೂ ಕೋಡಿ ರಿಪೇರಿ ಕೆಲಸಕ್ಕೆ ಮುಂದಾಗಿ ದ್ದಾರೆ. ಕಸಬಾ ಹೊಬಳಿ  ಜೆಡಿಎಸ್‌ ಮುಖಂಡರಾದ ಸೀಕಲ್‌ ಶ್ರೀನಿ ವಾಸಗೌಡ, ಕುರುಬೂರು ಎಂಪಿ ಸಿಎಸ್‌ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಎಂ.ಎನ್‌ ಮುನಿನಾರಾ ಯಣಪ್ಪ, ಪಣಸಚೌಡನಹಳ್ಳಿ ಗೋಪಾಲಕೃಷ್ಣಪ್ಪ, ಕಲ್ಲಹಳ್ಳಿ ಶ್ರೀರಾಮರೆಡ್ಡಿ, ಶಂಕರರೆಡ್ಡಿ,  ಮಾಡಿಕೆರೆ ರಾಜೇಶ್‌, ನಾಗರಾಜ್‌, ಮುನುಗನಹಳ್ಳಿ ಶ್ರೀನಿವಾಸ್‌, ಕುರಟಹಳ್ಳಿ ಕುಮಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next