ಆಗಮಿಸಿದ್ದಾರೆ. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ ಚಂದ್ರಶೇಖರರಾವ್ ಅರ್ಧ ಗಂಟೆಗೂ ಹೆಚ್ಚು ಕಾಲ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು. ಬೆಂಗಳೂರಿನಿಂದ ಮಂಗಳವಾರ
ರಾತ್ರಿಯೇ ಹೈದರಾಬಾದ್‌ಗೆ ವಾಪಸಾಗಿರುವ ಚಂದ್ರಶೇಖರರಾವ್ ಪೂರ್ವನಿಗದಿಯಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮೊದಲೇ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಯದೇ ಕಾರಣ ಹರಿದಾಡುತ್ತಿದೆ. ಕೆಸಿಆರ್‌ಗೆ ಕಾಂಗ್ರೆಸ್
ನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳಲು ಮನಸ್ಸಿಲ್ಲದ ಹಿನ್ನೆಲೆಯಲ್ಲಿ ಗೈರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement