Advertisement
ರಾವ್ ಜತೆ, ವಿಧಾನ ಪರಿಷತ್ ಸದಸ್ಯ ಮೊಹಮ್ಮದ್ ಮೆಹಮೂದ್ ಅಲಿ ಮಾತ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಡಿ.18 ರಂದು ಸಂಪುಟ ವಿಸ್ತರಣೆ ನಡೆವ ಸಾಧ್ಯತೆ ಇದೆ. ರಾವ್ ಅವರ ಕುಟುಂಬ ಸದಸ್ಯರು, ಟಿ ಆರ್‌ಎಸ್ ನಾಯಕರು ಹಾಜರಿದ್ದರು. ವಿಪಕ್ಷಗಳ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಆದರೆ ಕಾಂಗ್ರೆಸ್ ಎಂಎಲ್‌ಎಸಿ ಪಿ.ಸುಧಾಕರ ರೆಡ್ಡಿ, ಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಆಗಮಿಸಿದ್ದರು.
ಮಧ್ಯಪ್ರದೇಶದ 22 ಕ್ಷೇತ್ರಗಳಲ್ಲಿ ‘ನನ್ ಆಫ್ ದ ಎಬವ್’ (ಮೇಲ್ಕಂಡ ಯಾರೂ ಅಲ್ಲ) ಆಯ್ಕೆ ಬಿಜೆಪಿಯ ಜಯದ ಅಂತರ ತಗ್ಗಿಸಿದೆ. ಈ ಅಂಶವನ್ನು ಚುನಾವಣಾ ಆಯೋಗದ ದಾಖಲೆಗಳು ಪುಷ್ಟೀಕರಿಸಿವೆ. 5,42,295 ಮಂದಿ ಇವಿಎಂಗಳಲ್ಲಿ ನೋಟಾ ಬಟನ್ ಒತ್ತಿದ್ದಾರೆ. ಅದು ಚಲಾವಣೆಯಾದ ಮತಗಳ ಶೇ.1.4ರಷ್ಟಾಗುತ್ತದೆ. 2013ರ ಚುನಾವಣೆಯಲ್ಲಿ 6.43 ಲಕ್ಷ (ಶೇ.1.9) ಮಂದಿ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು. 22 ಕ್ಷೇತ್ರಗಳ ಪೈಕಿ 12 ಕಾಂಗ್ರೆಸ್, ನಾಲ್ವರು ಸಚಿವರೂ ಸೇರಿ 9 ಬಿಜೆಪಿ, 1 ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ. ಇದರ ಜತೆಗೆ ಬಿಎಸ್‌ಪಿ, ಮೇಲ್ವರ್ಗದ ಕೋಪ ಕೂಡ ಬಿಜೆಪಿಗೆ ಬರಬೇಕಾಗಿದ್ದ ಮತಗಳನ್ನು ತಪ್ಪಿಸಿತು.
Related Articles
– ಶಿವಸೇನೆ, ಮುಖವಾಣಿ ‘ಸಾಮ್ನಾ’ದಲ್ಲಿ
Advertisement
ಪಂಚರಾಜ್ಯ ಚುನಾವಣೆ ಫಲಿತಾಂಶ ಮುಂಬರಲಿರುವ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸುತ್ತದೆ. – ರಾಮ್‌ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ