ಗೋಣಿಕೊಪ್ಪಲು: ಕೆ.ಬಾಡಗ ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದು ಕೋಟಿ ಮೂವತ್ತು ಲಕ್ಷಕ್ಕೂ ಹೆಚ್ಚು ಅನುಧಾನದಲ್ಲಿ ರಸ್ತೆ ಡಾಮರು ಕಾಮಗಾರಿ ನಡೆಯಲಿದೆ.
ಮಳೆ ಹಾನಿ ದುರಸ್ಥಿ, ಕೊಡಗು ಪ್ಯಾಕೇಜ್ ಶಾಸಕರ ಅನುಧಾನದಲ್ಲಿ ಅಭಿವೃದ್ಧಿ ನಡೆಯಲಿದ್ದು ಶಾಸಕ ಕೆ.ಜಿ ಬೋಪಯ್ಯ ರಸ್ತೆ ಢಾಂಬರೀಕರಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಮಳೆ ಹಾನಿ ದುರಸ್ಥಿಯಲ್ಲಿ 15 ಲಕ್ಷ ವೆಚ್ಚದಲ್ಲಿ ಕರಿಯಚ್ಚಿ ಮನೆ ರಸ್ತೆ ಮತ್ತು ಶಾಸಕರ ಅನುಧಾನದಲ್ಲಿ ಹೇರ್ಮಾಡು, ಕಾಕೂರು ಲಿಂಕ್ ರಸ್ತೆ 3.50 ಲಕ್ಷ ಹಾಗೂ ಹೇರ್ಮಾಡು ಮುಖ್ಯ ರಸ್ತೆ ಮೂರು ಲಕ್ಷ ಅನುಧಾನದಲ್ಲಿ ಅಭಿವೃದ್ಧಿಗೊಳ್ಳಲಿದೆ. ಪಿ.ಡಬುÉ.ಡಿ ಇಲಾಖೆಯಿಂದ ಕೊಡಗು ವಿಶೇಷ ಪ್ಯಾಕೇಜ್ ಅಡಿಯಲ್ಲಿ ಆಲಂದೋಡು ಪೈಸೇರಿ ಸಂಪರ್ಕ ರಸ್ತೆ ಐದು ಲಕ್ಷ ವೆಚ್ಚದಲ್ಲಿ ಮತ್ತು ಹೇರ್ಮಾಡು ಸಂಪರ್ಕ ರಸ್ತೆ ಅಭಿವೃದ್ಧಿ ಐದು ಲಕ್ಷ ಅನುಧಾನದಲ್ಲಿ, ಮುಖ್ಯ ರಸ್ತೆಯಿಂದ ಕರಿಯಚ್ಚಿ ಮನೆ ಸಂಪರ್ಕ ರಸ್ತೆ ಐದು ಲಕ್ಷ ಮೊತ್ತದಲ್ಲಿ ರಸ್ತೆ ಢಾಂಬರೀಕರಣ ನಡೆಯಲಿದೆ.
ಹಾಗೂ ಸಿ.ಎಂ.ಜಿ.ಆರ್.ವೈ ಯೋಜನೆಯಡಿ 83 ಲಕ್ಷದಲ್ಲಿ ಕೆ.ಬಾಡಗ ನಾಲ್ಕೇರಿ ಮುಖ್ಯ ರಸ್ತೆ ಮರು ಢಾಂಬರೀಕರಣ ನಡೆಯಲಿದೆ.
ಗ್ರಾ.ಪಂ ಸದಸ್ಯೆ ಕಟ್ಟೇರ ಕುಮಾರಿ, ಜಿ.ಪಂ ಮಾಜಿ ಅಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ಪೆಮ್ಮಣಮಾಡ ನವೀನ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಹೊಟ್ಟೆಂಗಡ ರಮೇಶ್, ಪ್ರಮುಖರಾದ ಕುಡಿಯಂಗಡ ರಾಜ ವಿನೋದ್, ಸುಜನ್, ರಮೇಶ್, ಬೊಳ್ಳೇರ ವಿನು ಅಪ್ಪಯ್ಯ, ಚೆಪ್ಪುಡಿರ ರೂಪ, ಗುತ್ತಿಗೆದಾರ ಇ.ವೈ. ಸುನಿಲ್ ಸುಬ್ಬಯ್ಯ, ಮತ್ತು ವಿರಾಜಪೇಟೆ ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಉಪಸ್ಥಿತರಿದ್ದರು.