Advertisement

ಕೋವಿಡ್ ಪೀಡಿತ ಮಕ್ಕಳಲ್ಲಿ ಕಾಣಿಸಿಕೊಂಡ ಕವಾಸಕಿ; ಮುಂಬಯಿ ಆಸ್ಪತ್ರೆಯಲ್ಲಿ 2 ಮಕ್ಕಳ ಸಾವು

09:22 AM Jul 23, 2020 | mahesh |

ಮುಂಬಯಿ: ಕೋವಿಡ್ ಸೋಂಕಿಗೆ ಒಳಗಾಗಿ ಮುಂಬಯಿಯ ವಾಡಿಯಾ ಮಕ್ಕಳ ಆಸ್ಪತ್ರೆಗೆ ದಾಖಲಾದ 100 ಮಕ್ಕಳ ಪೈಕಿ 18 ಮಕ್ಕಳಲ್ಲಿ ಕವಾಸಕಿ ಮಾದರಿಯ ರೋಗ ಕಾಣಿಸಿಕೊಂಡಿದ್ದು, ಇದು ವೈದ್ಯರ ಕಳವಳಕ್ಕೆ ಕಾರಣವಾಗಿದೆ.

Advertisement

ಮಕ್ಕಳಿಗೆ ಜ್ವರ ಬರುವುದು, ಚರ್ಮದ ಮೇಲೆ ಕೆಂಪನೆಯ ಗುಳ್ಳೆಗಳು ಏಳುವುದು, ಕಣ್ಣು ಕೆಂಪಾಗುವುದು, ಆಯಾಸ ಮತ್ತು ಅತಿಭೇದಿ ಈ ರೋಗದ ಲಕ್ಷಣಗಳು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಮಕ್ಕಳು ಸಾವಿಗೀಡಾಗುವ ಸಾಧ್ಯತೆ ಇದೆ. ಮುಂಬಯಿಯಲ್ಲಿ ಈಗಾಗಲೇ ಇಬ್ಬರು ಮಕ್ಕಳು ಈ ರೋಗದಿಂದ ಮೃತಪಟ್ಟಿದ್ದಾರೆ. ಜಪಾನಿನ ಶಿಶುವೈದ್ಯ ಟೊಮಿಸ್ಕಾ ಕವಾಸಕಿಯವರು ಈ ರೋಗವನ್ನು ಮೊದಲಿಗೆ ಪತ್ತೆ ಹಚ್ಚಿದ್ದರಿಂದ ಇದಕ್ಕೆ ಅವರ ಹೆಸರನ್ನು ಇಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಡಿಯಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ| ಶಕುಂತಳಾ ಪ್ರಭು, ಈ ರೋಗದ ಸೋಂಕಿನಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಆ ಪೈಕಿ ಒಂದು ಮಗುವಿಗೆ ಈ ಸೋಂಕಿನ ಜತೆ ಕ್ಯಾನ್ಸರ್‌ ಇತ್ತು. ನಾಲ್ವರು ಮಕ್ಕಳು ಚೇತರಿಸಿಕೊಳ್ಳುತ್ತಿ ದ್ದಾರೆ. ಉಳಿದ ಮಕ್ಕಳು ಗುಣಮುಖ ರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next