Advertisement
ಕಾಗದ ನಮಗಿಂದು ಅಗ್ಗವಾಗಿ ಸಿಗುತ್ತಿದ್ದರು. ಅದರಿಂದ ಆಗುತ್ತಿರುವ ಹಾಣಿ ಅಷ್ಟಿಷ್ಟಲ್ಲ ಪ್ರತೀ ವರ್ಷ 3.3 ದಶಲಕ್ಷ ಹೆಕ್ಟೆರ್‌ನಷ್ಟು ಕಾಡಿನ ಮಾರಣ ಹೋಮ ಮತ್ತು ಇದರಿಂದ ವನ್ಯಜೀವಿಗಳಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮ ಸಾಕಷ್ಟಿದೆ .
Related Articles
2000 ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಇವರು ಕೆಲವು ಕಾಲ ಎನ್‌ಜಿಒ ಒಂದರಲ್ಲಿ ಕಾರ್ಯನಿರ್ವಹಿಸಿದ್ದರು. 2005ರಲ್ಲಿ ಹುಟ್ಟೂರಾದ ಮಡಿಕೇರಿಗೆ ಮರಳಿ ರೆಸಾರ್ಟ್ ಪ್ರಾರಂಭಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ನಡುವೆ -2016ರಿಂದ ಮರಗಳ ಹೊರತಾಗಿ ಕಾಗದ ಉತ್ಪಾದಿಸಬಹುದೇ ಎಂಬ ಯೋಚನೆ ಹೊಳೆದು ಅದರ ಸಾಕಾರದತ್ತ ಸಾಗಿದ ಫಲವೇ ಇಂದು ಅವರ “ಬ್ಲೂ ಕ್ಯಾಟ್ ಪೇಪರ್’ ಕಾರ್ಖಾನೆ. ಜೈಪುರದ ಕುಮಾರಪ್ಪ ನ್ಯಾಶನಲ್ ಹ್ಯಾಂಡ್ ಮೇಡ್ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿ ಅಲ್ಲಿ 15 ದಿನಗಳ ಕಾಲ ಕೈಯಿಂದ ಕಾಗದ ತಯಾರಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಇಂದು ಬೆಂಗಳೂರಿನ ಪಿನ್ಯಾದಲ್ಲಿ 20 ಸಾವಿರ ಚದರ ಅಡಿಯಷ್ಟು ದೊಡ್ಡ ಕಾರ್ಖಾನೆ ಕಟ್ಟಿ ಮುನ್ನಡೆಸುತ್ತಿದ್ದಾರೆ.
Advertisement
ತ್ಯಾಜ್ಯಕ್ಕೂ ಒಂದು ಮೌಲ್ಯ ನೀಡಿದವರುಈಗಿನ ಪೇಪರ್ ತಯರಿಕಾ ಯಂತ್ರಗಳೆಲ್ಲ ಕಟ್ಟಿಗೆ ಆಧಾ ರಿತವಾಗಿದ್ದರಿಂದ ತ್ಯಾಜ್ಯದಿಂದ ಕಾಗದ ತಯಾರಿಗೆ ಅವುಗಳ ಕೊಡುಗೆ ಶೂನ್ಯವೇ ಆಗಿದೆ. ಹಲವಾರು ತಂತ್ರಜ್ಞರು ಮತ್ತು ಎಂಜಿನಿಯರ್‌ಗಳ ಸಹಾಯದಿಂದ ಲಕ್ಷಾಂತರ ರೂ ವ್ಯಯಿಸಿ ಇದಕ್ಕೆ ಹೊಂದುವಂತ ಯಂತ್ರಗಳನ್ನು ತಯಾರಿಸಿದ್ದಾರೆ. ಹತ್ತಿಯ ಚಿಂದಿ, ಲೆಮನ್ ಗ್ರಾಸ್, ರೈತರಿಂದ ಅಗಸೆ, ಮಲ್ಬೆರಿ, ಕಾಫಿ ಹೊಟ್ಟು, ಬಾಳೆ ಕೊರಡು, ತೆಂಗಿನ ಹೊಟ್ಟು ಹೀಗೆ ದ್ವಿತೀಯ ದರ್ಜೆಯ ತ್ಯಾಜ್ಯ ಸಂಗ್ರಹಿಸಿ ಅನಂತರ ಅದನ್ನು ಸಂಸ್ಕರಿಸುವ ಮೂಲಕ ಕಾಗದವನ್ನಾಗಿ ಪರಿವರ್ತಿಸುತ್ತಿದ್ದಾರೆ ಕವ್ಯಾ ಅವರು. ಅಲ್ಲದೇ ಬ್ಲೂ ಕ್ಯಾಟ್ ಸಂಸ್ಥೆ ತ್ಯಾಜ್ಯ ಪಡೆದು ಅದಕ್ಕೆ ಪ್ರತಿಯಾಗಿ ಕೆ.ಜಿ.ಗೆ 8ರಿಂದ 120ರ ವರೆಗೂ ಬೆಲೆ ನೀಡುತ್ತದೆ. ವಿಶಿಷ್ಟ ರೀತಿಯ ಕಾಗದ ತಯಾರಿಕೆ
ಇತೆರೆ ಕಂಪೆನಿಗಳು ಕಾಗದ ತಯಾರಿಸಿ ಅದನ್ನು ಬಿಳಿಯಾಗಿಸಲು ಕೆಲವೊಂದಿಷ್ಟು ರಾಸಾಯನಿಕ ಬಳಸುತ್ತವೆ. ಆದರೆ ಬ್ಲೂ ಕ್ಯಾಟ್ ಸಂಸ್ಥೆ ಬಿಳಿ ಹತ್ತಿಯ ಚಿಂದಿ ಬಳಸಿ ತಯಾರಿಸುತ್ತದೆ. ಅಲ್ಲದೇ ನೋಟ್ ಪುಸ್ತಕ, ಬ್ಯಾಗ್‌ಗಳು, ಲಕೋಟೆ, ಶುಭಾಶಯ ಪತ್ರಗಳು, ಫೋಟೋ ಫ್ರೇಮ್ , ಟೇಬಲ್ ಮ್ಯಾಟ್, ಗಿಫ್ಟ್ ಬಾಕ್ಸ್ ಇತ್ಯಾದಿ ತಯಾರಿಸಲಾಗುತ್ತದೆ. ನವೀನ ಕಲ್ಪನೆಯ ವಿವಾಹ ಆಮಂತ್ರಣ ಪತ್ರಿಕೆಯನ್ನೂ ಇವರು ತಯಾರಿಸುತ್ತಾರೆ. ವಿವಾಹ ಪತ್ರಗಳು ಮರುಬಳಕೆ ಆಗದ ಕಾರಣ ಅದರಲ್ಲಿ ಬೀಜಗಳನ್ನು ಸೇರಿಸಿ ತಯಾರಿಲಾಗುತ್ತಸದೆ ಇವಗಳನ್ನು ಮಣ್ಣಿನಲ್ಲಿ ಹೂಳಬಹುದು ಹಾಗಾಗಿ ಪರಿಸರ ಸ್ನೇಹಿಯೂ ಆಗಿದೆ. ಹೀಗೆ ಹೊಸ ಪರಿಕಲ್ಪನೆಯಿಂದ ಬ್ಲೂ ಕ್ಯಾಟ್ ಸಂಸ್ಥೆ ಗ್ರಾಹಕರನ್ನು ಸೆಳೆಯುತ್ತಿದೆ ಜತೆಗೆ ಪರಿಸರ ಸ್ನೇಹಿ ಸರಕನ್ನೂ ಉತ್ಪಾದಿಸುತ್ತಿದೆ. ಅನೇಕ ಸವಾಲುಗಳೂ ಇವೆ
ಪರಿಸರ ಸ್ನೇಹಿ ಉತ್ಪಾದನೆ ಅಥವಾ ಏನಾದರೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದಾಗ ಅಲ್ಲಿ ತೊಂದರೆಗಳ ಸರಮಾಲೆ ಖಂಡಿತ. ಬ್ರಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಕೈಗಾರಿಕೆಗಳೊಂದಿಗೆ ಸೆನೆಸಬೇಕಾದರೆ ನಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಸದ್ಯಕೆ ನಾವು ದಿನಕ್ಕೆ 5 ಸಾವಿರ ಕಾಗದದ ಹಾಳೆಗಳನ್ನು ಉತ್ಪಾದಿಸುತ್ತಿದ್ದೇವೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಅದರ ಶೇಖರಣಾ ಸಾಮರ್ಥ್ಯವೂ ಹೆಚ್ಚಿಸಿಕೊಳ್ಳಬೇಕಿದೆ. ಬೆಲೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿತಗೊಳಿಸಿ ಬೆಡಿಕೆ ಹೆಚ್ಚಿಸಿಕೊಳ್ಳುವ ಅಗತ್ಯತೆ ಇದೆ ಎನ್ನುತ್ತರೆ ಕಾವ್ಯಾ ಅವರು. ಒಂದು ಮರವನ್ನು ಬೆಳೆಸಲು ಕನಿಷ್ಟ 7ರಿಂದ 20 ವರ್ಷ ಸಮಯ ಬೇಕಾಗುತ್ತದೆ. ಇಂದು ಜನಸಂಖ್ಯೆ ಮತ್ತು ತ್ಯಾಜ್ಯವೂ ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ನಾವು ಇದನ್ನು ಸದುಪಯೋಗ ಪಡೆದುಕೊಂಡು ಪರಿಸರ ಸಂರಕ್ಷಣೆಗೆ ಪಣ ತೋಡಬೇಕು. ಮುಂದೆ ಜಗತ್ತಿನ ಹಲವಾರ ಕೈಗಾರಿಕೆಗಳು ಮರಮುಕ್ತ ಕಾಗದದತ್ತ ಮುಖಮಾಡಬಹುದು ಎಂದು ನಂಬಿದ್ದೇನೆ ಎನ್ನುತ್ತಾರೆ ಕಾವ್ಯಾ ಅವರು. -ಶಿವಾನಂದ ಎಚ್.