Advertisement

ಬೀರಬಲ್‌ನಲ್ಲಿ ಕವಿತಾ ಗೆಸ್ಟ್‌ ಅಪಿಯರೆನ್ಸ್‌

10:53 AM Oct 28, 2018 | Team Udayavani |

ಶ್ರೀನಿ ನಿರ್ದೇಶನದ “ಬೀರಬಲ್‌’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿರುವ ವಿಚಾರವನ್ನು ಮೊನ್ನೆಯಷ್ಟೇ ಓದಿದದ್ದೀರಿ. ಈಗ ಚಿತ್ರತಂಡದಿಂದ ಮತ್ತೂಂದು ಸುದ್ದಿ ಹೊರಬಂದಿದೆ. ಅದು ನಟಿಯೊಬ್ಬಳು ಗೆಸ್ಟ್‌ ಅಪಿಯರೆನ್ಸ್‌ ಮಾಡಿರುವ ಸುದ್ದಿ. ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದು, ಒಂದಷ್ಟು ಸಿನಿಮಾಗಳಲ್ಲಿ ನಾಯಕಿ ನಟಿಸಿರುವ ಕವಿತಾ “ಬೀರಬಲ್‌’ ಚಿತ್ರದಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ.

Advertisement

ಹಾಗಂತ ಸುಮ್ಮನೆ ಬಂದು ಹೋಗುವ ಪಾತ್ರವಲ್ಲ. ಕಥೆಗೆ ಪ್ರಮುಖ ತಿರುವು ನೀಡುವ ಪಾತ್ರ ಎನ್ನುವುದು ನಿರ್ದೇಶಕ ಶ್ರೀನಿ ಮಾತು. ಶ್ರೀನಿವಾಸ್‌ ನಿರ್ದೇಶನದ “ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಕವಿತಾ ನಾಯಕಿಯಾಗಿ ನಟಿಸಿದ್ದರು. ಈಗ ಶ್ರೀನಿ ನಿರ್ದೇಶನದ “ಬೀರಬಲ್‌’ದಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಸದ್ಯ ಕವಿತಾ “ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ.

“ಚಮಕ್‌’, “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್‌.ಚಂದ್ರಶೇಖರ್‌ “ಬೀರಬಲ್‌’ ಚಿತ್ರವನ್ನು ನಿರ್ಮಿಸಿದ್ದಾರೆ. “ಬೀರ್‌ಬಲ್‌ ಚಿತ್ರ ಮೂರು ಹಂತಗಳಲ್ಲಿ ಬರಲಿದೆ. ಈಗ ಮೊದಲ ಹಂತವಾದ “ಫೈಂಡಿಂಗ್‌ ವಜ್ರಮುನಿ’ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್‌ನಲ್ಲಿ ತೆರೆಗೆ ಬರಲಿದೆ.

“ಫೈಂಡಿಂಗ್‌ ವಜ್ರಮುನಿ’ ನಂತರ  “ಅವರನ್‌ ಬಿಟ್‌ ಇವರನ್‌ ಬಿಟ್‌ ಅವರ್ಯಾರು’ ಮತ್ತು “ತುರೇ ಮಣೆ’ ಬಿಡುಗಡೆಯಾಗಲಿವೆ. ನಿರ್ದೇಶಕ ಶ್ರೀನಿ, ಈ ಮೂರು ಭಾಗಗಳಲ್ಲೂ ಬೀರಬಲ್‌ ಎಂಬ ಲಾಯರ್‌ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಲಾಯರ್‌ವೊಬ್ಬನ ಸಾಹಸಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನಕ್ಕೆ ಶ್ರೀನಿ ಕೈ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next