Advertisement

ಕವಿತಾ ಲಂಕೇಶ್‌ ಹೊಸ ಚಿತ್ರ ಶುರು

11:16 AM Jan 16, 2017 | Team Udayavani |

“ಕರಿಯ ಕಣಿºಟ್ಟ’ ಸಿನಿಮಾದ ನಂತರ ಕವಿತಾ ಲಂಕೇಶ್‌ ಅದ್ಯಾಕೋ ಯಾವುದೇ ನಿರ್ದೇಶನ ಮಾಡಿರಲಿಲ್ಲ. ಕವಿತಾ ಲಂಕೇಶ್‌ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಹೆಸರಿಡದ ಚಿತ್ರವೊಂದನ್ನು ಅವರು ನಿರ್ದೇಶಿಸಲಿದ್ದು, ಅಂದಹಾಗೆ, ಈ ಚಿತ್ರದ ಹೀರೋ ಯಾರು ಗೊತ್ತಾ? “ಕೇಸ್‌ ನಂ 18/7′ ಚಿತ್ರದಲ್ಲಿ ಹೀರೋ ಆಗಿದ್ದ ನಿರಂಜನ್‌ ಶೆಟ್ಟಿ, ಈ ಚಿತ್ರಕ್ಕೆ ನಾಯಕರಾಗಿದ್ದಾರೆ. ನಿರಂಜನ್‌ ಅಭಿನಯದ “ರಾಜರು’ ಎಂಬ ಚಿತ್ರ ಇತ್ತೀಚೆಗಷ್ಟೇ ಶುರುವಾಗಿತ್ತು.

Advertisement

ಈಗ ಅವರು ಕವಿತಾ ಲಂಕೇಶ್‌ ನಿರ್ದೇಶನದ ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿದ್ದಾರೆ. ಸುಧೀಕ್ಷ ಗ್ರೂಪ್‌ ಆಫ್ ಕಂಪೆನಿಯ ಸುಬ್ರಹ್ಮಣ್ಯ ಶರ್ಮ ಆವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹೆಸರಿಡದ ಚಿತ್ರವು, ಕವಿತಾ ಲಂಕೇಶ್‌ ನಿರ್ದೇಶನದ ಎಂಟನೇ ಚಿತ್ರವಾಗಲಿದ್ದು, ಚಿತ್ರಕ್ಕೆ ಕವಿತಾ ಅವರೇ ಕಥೆ, ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ಮಾರ್ಚ್‌ನಲ್ಲಿ ಶುರುವಾಗಲಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಬೆಂಗಳೂರು, ಉತ್ತರ ಕರ್ನಾಟಕ ಮತ್ತು ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next