Advertisement

Cauvery Water Problem; ಸಾಯುವುದರೊಳಗೆ ಕಾವೇರಿ ಸಮಸ್ಯೆಗೆ ಮುಕ್ತಿ: ಎಚ್‌ಡಿಕೆ

10:40 AM Jul 15, 2024 | Team Udayavani |

ಪಾಂಡವಪುರ: ನಾನು ಸಾಯುವುದರೊಳಗೆ ಕಾವೇರಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ಪಟ್ಟಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಾವೇರಿ ಸಮಸ್ಯೆ ಇಂದು ನಿನ್ನೆಯದಲ್ಲ. ತತ್‌ಕ್ಷಣಕ್ಕೆ ಬಗೆಹರಿಯುವಂಥದ್ದೂ ಅಲ್ಲ. ದೇವೇಗೌಡರು ಸಹ 90 ವರ್ಷದ ಇಳಿ ವಯಸ್ಸಿನಲ್ಲೂ ಹಲವಾರು ನೋವುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಕಾವೇರಿ ಸಮಸ್ಯೆಯ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿದ್ದಾರೆ. ನಾನು ದೇವೇಗೌಡರ ಸಲಹೆ ಪಡೆದು ಕಾವೇರಿ ನೀರಿನ ಸಮಸ್ಯೆ ಬಗ್ಗೆ ಪ್ರಧಾನಿ ಜತೆ ಚರ್ಚಿಸಿ ಸಾಯುವುದರೊಳಗೆ ಕಾವೇರಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ನಾನು ಕೇಂದ್ರ ಸಚಿವನಾಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಕಿವುಚಿಕೊಳ್ಳುವಂತಾಗಿದೆ. ರಾಜ್ಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ನಾನು ಹೇಳಿದರೂ ಕಾಂಗ್ರೆಸ್‌ನವರು ದ್ವೇಷ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು. ಎಸ್ಸಿ-ಎಸ್ಟಿ ಸಮುದಾಯದ 187 ಕೋಟಿ ರೂ., ವಾಲ್ಮೀಕಿ ಸಮುದಾಯದ ಹಣ ಲೂಟಿ ಮಾಡಿ ಕಾಂಗ್ರೆಸ್‌ನವರು ಭಂಡತನದಿಂದ ಓಡಾಡುತ್ತಿದ್ದಾರೆ. ಅಂತಹ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ ಎಂದರು.

“ದೇವೇಗೌಡರ ಮೇಲಿನ ಪ್ರೀತಿ, ನೀವು ಕೊಟ್ಟ ಶಕ್ತಿಯಿಂದ ಕೇಂದ್ರದಲ್ಲಿ ನಾನು ಮಂತ್ರಿಯಾಗಿದ್ದೇನೆ. ಹಳೇ ಮೈಸೂರು ಪ್ರಾಂತ್ಯದಲ್ಲಿ 14 ಲೋಕಸಭಾ ಸ್ಥಾನಕ್ಕೆ 12 ಸ್ಥಾನ ಗೆಲ್ಲಿಸಿಕೊಟ್ಟಿದ್ದೀರಿ. ಕುಮಾರಸ್ವಾಮಿ ಗೆದ್ದು ಮಂತ್ರಿಯಾದರೆ ರೈತರಿಗೆ ಒಳ್ಳೆಯದಾಗಲಿದೆ ಎಂಬ ಭಾವನೆಯಿಂದ ಗೆಲ್ಲಿಸಿ ಮಂತ್ರಿ ಮಾಡಿದ್ದೀರಿ. ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ.” – ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಸಮಸ್ಯೆ ನಿವಾರಣೆ ಪ್ರಥಮ ಆದ್ಯತೆ ಎಂದವರಾರು: ಸಚಿವ ಚಲುವರಾಯಸ್ವಾಮಿ

Advertisement

ಮಂಡ್ಯ: ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮುಂದೆ ರಾಜ್ಯದ ಅ ಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಈ ಬಗ್ಗೆ ಲಿಖೀತ ದಾಖಲೆಗಳಿವೆ. ವಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಸುದ್ದಿಗಾರರ ಜತೆ ಮಾತನಾಡಿ, ಕಾವೇರಿ ಸಮಸ್ಯೆಗೆ ಮೊದಲ ಆದ್ಯತೆ ನೀಡುತ್ತೇನೆಂದು ಚುನಾವಣೆ ವೇಳೆ ನಾನು ಹೇಳಿದ್ದೆನಾ? ಕಾವೇರಿ ಕೀಲಿ ಕೈ ನನ್ನ ಬಳಿಯಿಲ್ಲ ಎಂದು ನಾನು ಹೇಳಿದ್ದೆನಾ? ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next