Advertisement

“ಕಾವೇರಿ ಕೂಗು’ಪೂರ್ವಭಾವಿ ಚಾಲನೆ

11:46 PM Aug 05, 2019 | Lakshmi GovindaRaj |

ಮೈಸೂರು: ಮೈಸೂರಿನ ಅರಮನೆಯ ಬಲರಾಮ ದ್ವಾರದ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಾವೇರಿ ಕೂಗು (ಕಾವೇರಿ ಕಾಲಿಂಗ್‌) ಅಭಿಯಾನಕ್ಕೆ ಪೂರ್ವಭಾವಿಯಾಗಿ ಚಾಲನೆ ನೀಡಿದರು.

Advertisement

ಕಾವೇರಿ ಕೂಗು ಅಭಿಯಾನಕ್ಕೆ ಸೆ.3ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸದ್ಗುರು ಚಾಲನೆ ನೀಡಲಿದ್ದು, ಈ ಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಲು ಮೈಸೂರು ಭಾಗದಲ್ಲಿ ಜಾಗೃತಿ ಜಾಥಾ ನಡೆಯಿತು. ಒಟ್ಟು ಎಂಟು ವಾಹನಗಳು ನದಿ ಸಂರಕ್ಷಣೆಯ ಉದ್ದೇಶ ಹೊತ್ತು ನಂಜನಗೂಡು ಮಾರ್ಗ ಮೂಲಕ ಚಾಮರಾಜನಗರಕ್ಕೆ ತೆರಳಿದವು.

ವಾಹನಗಳಿಗೆ ಎಲ್‌ಇಡಿ ಪರದೆ ಅಳವಡಿಸಿ ನದಿಗಳು, ಪರಿಸರ, ಅರಣ್ಯಗಳು ರೈತರಷ್ಟೇ ಅಲ್ಲ, ಸಾಮಾನ್ಯರ ಬದುಕಿಗೆ ಹೇಗೆ ಉಪಯುಕ್ತ ಎಂಬುದನ್ನು ಪ್ರದರ್ಶಿಸಲಾಯಿತು. ಜೊತೆಗೆ ಕಾವೇರಿ ಪರಿಸರ ಹಾಳಾಗುತ್ತಿರುವ ಬಗ್ಗೆ ಹಾಗೂ ಅದರ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಸದ್ಗುರು ಜಗ್ಗಿ ವಾಸುದೇವ ಮಾತಾಡಿರುವ ವಿಡಿಯೋ ಗಳನ್ನು ತೋರಿಸಲಾಯಿತು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಈಶಾ ಫೌಂಡೇಷನ್‌ನವರು ಈ ಅಭಿಯಾನ ಶುರು ಮಾಡಿದ್ದು, ಇದೊಂದು ಉತ್ತಮ ಆಲೋಚನೆ. ಭಾರತದಲ್ಲಿ ನದಿಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಸಹಕಾರಿ ಯಾಗಲಿದೆ ಎಂದರು. ಶಾಸಕ ಎಸ್‌.ಎ. ರಾಮದಾಸ್‌, ಜಿಕೆವಿಕೆ ಸಂಶೋಧನಾ ನಿವೃತ್ತ ನಿರ್ದೇಶಕ ಮತ್ತು ಒಣ ಭೂಮಿ ಕೃಷಿ ಮುಖ್ಯಸ್ಥ ಡಾ.ಎಂ.ಎ.ಶಂಕರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next