Advertisement
ಅಕ್ರಮ ಮರಳು ದಕ್ಕೆ ನಾಶ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ ಹಾಗೂ ಹೊಸಾಳದ ಐದು ಕಡೆಗಳಲ್ಲಿ ಅಕ್ರಮ ದಕ್ಕೆ ನಿರ್ಮಿಸಿ ದೋಣಿ ಮೂಲಕ ಮರಳುಗಾರಿಕೆ ನಡೆಸಲಾಗುತ್ತಿತ್ತು. ಈ ಕುರಿತು ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರು. ಆದರೆ ಈ ತನಕ ಸಂಬಂಧಪಟ್ಟ ಇಲಾಖೆ ಸಮರ್ಪಕ ಕ್ರಮ ಕೈಗೊಂಡಿರಲಿಲ್ಲ ಎನ್ನುವ ದೂರು ಸ್ಥಳೀಯರಿಂದ ಕೇಳಿಬಂದಿತ್ತು. ಈ ನಡುವೆ ಬುಧವಾರ ಕೋಟ ಕಂದಾಯ ಅಧಿಕಾರಿ ಚಂದ್ರಹಾಸ ಬಂಗೇರ ಅವರು ತಮ್ಮ ತಂಡದೊಂದಿಗೆ ಇಲ್ಲಿಗೆ ಭೇಟಿ ನೀಡಿ ಜೇಸಿಬಿ ಮೂಲಕ ದಕ್ಕೆಗಳನ್ನು ನಾಶಪಡಿಸಿ, ವಾಹನಗಳು ತೆರಳದಂತೆ ಹೊಂಡ ನಿರ್ಮಿಸಿದರು.
ಈ ಐದು ಕಡೆಗಳಲ್ಲಿ ಮಣ್ಣು ಸಮತಟ್ಟು ಮಾಡಿ, ವಾಹನ ಇಳಿಯಲು ರ್‍ಯಾಂಪ್‌ಗ್ಳನ್ನು ನಿರ್ಮಿಸಿ, ದೋಣಿಯ ಮೂಲಕ ಮರಳನ್ನು ಹೊಳೆಯಿಂದ ಮೇಲೆತ್ತಳು ವ್ಯವಸ್ಥೆ ಮಾಡಿರುವುದು ತಿಳಿದು ಬಂತು ಹಾಗೂ ಕಾವಡಿ ಸೇತುವೆಯ ಕೆಳಗಡೆಯೇ ಮರಳುಗಾರಿಕೆ ನಡೆಯುತ್ತಿರುವುದು ತಿಳಿದು ಬಂತು. ಅಕ್ರಮಕ್ಕೆ ಆಸ್ವದವಿಲ್ಲ
ಇನ್ನು ಮುಂದೆ ಯಾವುದೇ ಕಾರಣಕ್ಕೆ ಅಕ್ರಮ ಮರಳುಗಾರಿಕೆ ನಡೆಸಲು ಆಸ್ಪದ ನೀಡುವುದಿಲ್ಲ. ಒಂದು ವೇಳೆ ಮರಳುಗಾರಿಕೆ ನಡೆದರೆ ಸ್ಥಳೀಯರು ನಮ್ಮ ಗಮನಕ್ಕೆ ತಂದಲ್ಲಿ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಉಪಸ್ಥಿತರಿದ್ದ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು.
Related Articles
Advertisement