ಉಡುಪಿ: ಕಟಪಾಡಿ ಏಣಗುಡ್ಡೆ ರಾ.ಹೆ. 66ರ ಬಳಿ “ಕೌಸ್ತುಭ ರೆಸಿಡೆನ್ಸಿ’ ಹೊಟೇಲ್ ಮತ್ತು ವಾಣಿಜ್ಯ ಸಂಕೀರ್ಣ ಉದ್ಘಾಟನೆಯನ್ನು ರವಿವಾರ ಶಾಸಕ ಕೆ. ರಘುಪತಿ ಭಟ್ ಅವರು ನೆರವೇರಿಸಿ ಶುಭಹಾರೈಸಿದರು.
ಉಡುಪಿಯ ಹೊಟೇಲ್‌ಗಳು ಆತಿಥ್ಯ ಮತ್ತು ಶುಚಿರುಚಿಯಾಗಿರುವ ಆಹಾರಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ವರ್ಗದ ಪ್ರವಾಸಿಗರು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಟೇಲ್‌ಗಳು ಸೇವೆ ನೀಡುತ್ತಿರುವುದು ಶ್ಲಾಘನೀಯ. ಜಿಲ್ಲೆಯೂ ರಜತ ಮಹೋತ್ಸವ ಸಂದರ್ಭದಲ್ಲಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾಲಘಟ್ಟದಲ್ಲಿ ಕೌಸ್ತುಭ ಒಂದು ಕಾಣಿಕೆಯಾಗಿದೆ. ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಆತಿಥ್ಯ ನೀಡಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಸಂಸ್ಥೆಯೂ ಬೆಳೆಯಲಿ ಎಂದು ಶಾಸಕ ಭಟ್ ಆಶಿಸಿದರು.
ಜಿ. ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ದೀಪ ಬೆಳಗಿಸಿದರು. ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಆಚಾರ್, ತಮಿಳುನಾಡು ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಎ. ರಾಮದಾಸ ರಾವ್, ತಂತ್ರಿ ಕುಟುಂಬದ ಮುಖ್ಯಸ್ಥ ಪಿ. ರಾಮದಾಸ ತಂತ್ರಿ, ಪ್ರಮುಖರಾದ ವಿಜಯಾ ರಾವ್, ಶ್ರೀಕಾಂತ್ ರಾವ್ ಕೊಡಂಚ, ನರಸಿಂಹ ಅಡಿಗ, ವಿಜಯ ರಾವ್, ಕವಿತಾ ನವೀನ್ ಉಪಸ್ಥಿತರಿದ್ದರು.ಕೌಸ್ತುಭ ರೆಸಿಡೆನ್ಸಿ ಮಾಲಕರಾದ ನಗರಸಭೆ ಸದಸ್ಯ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿಕ್ರಮ್‌ರಾವ್ ಕೊಡಂಚ ವಂದಿಸಿದರು. ಪ್ರವಾಸೋದ್ಯಮಿ ಮರವಂತೆ ನಾಗರಾಜ್ ಹೆಬ್ಟಾರ್ ಅಭಿನಂದನಾ ಭಾಷಣ ಮಾಡಿದರು. ಡಾ| ವಿಜಯೇಂದ್ರ ವಸಂತ್ ನಿರೂಪಿಸಿದರು.
ಕೌಸ್ತುಭ ರೆಸಿಡೆನ್ಸಿ ವ್ಯವಸ್ಥಿತ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ. ಹೋಟೆಲ್ ಸಂಕೀರ್ಣದಲ್ಲಿ ಫ್ಯಾಮಿಲಿ ರೆಸ್ಟೋರೆಂಟ್ ಸೌಲಭ್ಯ, ಅತ್ಯಾಧುನಿಕವಾಗಿ ನಿರ್ಮಾಣಗೊಂಡ 26 ಎಸಿ ಮತ್ತು ನಾನ್ ಎಸಿ ಕೊಠಡಿಗಳು, ಪಾರ್ಟಿ ಹಾಲ್, ವಾಣಿಜ್ಯ ಮಳಿಗೆಯನ್ನು ಹೊಂದಿದೆ.
ಇದನ್ನೂ ಓದಿ: ಕಾಶ್ಮೀರ ಕುರಿತ ಹೇಳಿಕೆ; ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ವಿವೇಕ್ ಅಗ್ನಿಹೋತ್ರಿ