2 ಅಂತಾರಾಷ್ಟ್ರೀಯ ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಿದೆ.
Advertisement
ಈ ಪಂದ್ಯದ ವೇಳೆ ತಮ್ಮ ವಿರುದ್ಧ ಲೆಗ್ ಬಿಫೋರ್ ತೀರ್ಪು ಬಂದಾಗ ಆಕ್ರೋಶ ಗೊಂಡ ಕೌರ್, ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದಿದ್ದರು. ಬಳಿಕ ಅಂಪಾಯರ್‌ಗಳನ್ನು ಬಹಿರಂಗ ಟೀಕಿಸಿದ್ದರು. ಫೋಟೋ ಸೆಷನ್ ವೇಳೆ ಬಾಂಗ್ಲಾ ಅಂಪಾಯರ್‌ಗಳೂ ಬರಲಿ ಎಂದು ವ್ಯಂಗ್ಯ ವಾಡಿದ್ದರು. ಈ ಎಲ್ಲ ಅಶಿಸ್ತಿನ ವರ್ತನೆಗಳನ್ನು ಪರಿಗಣಿಸಿ ಕೌರ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 75ರಷ್ಟು ದಂಡ ಹೇರಲಾಗಿತ್ತು. ಅಮಾನತಿನಿಂದಾಗಿ ಮುಂಬರುವ ಏಷ್ಯಾಡ್ ಕೂಟದ ಮೊದಲೆರಡು ಪಂದ್ಯಗಳಿಂದ ಕೌರ್ ಹೊರಗುಳಿಯಲಿದ್ದಾರೆ.