ಕಾಪು: ಇಲ್ಲಿನ ಪುರಸಭೆಯ ಎರಡನೇ ಅವಧಿಯ ಚುನಾವಣೆಗೆ ಚಾಲನೆ ದೊರಕಿದ್ದು, ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಆರಂಭಗೊಂಡಿದೆ.
ಕಾಪು ಪುರಸಭೆಯ 23 ವಾರ್ಡ್‌ಗಳಿಗೆ 23 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇದಕ್ಕಾಗಿ ತಾಲೂಕು ಆಡಳಿತದ ವತಿಯಿಂದ 26 ಎಪಿರ್‌ಒ, 52 ಪಿಒ ಹಾಗೂ 26 ಡಿ ಗ್ರೂಫ್ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕೈಪುಂಜಾಲು, ಪೊಲಿಪುಗುಡ್ಡೆ, ಕೊಂಬಗುಡ್ಡೆ ಹಾಗೂ ಅಹಮದಿ ಮೊಹಲ್ಲಾ ಅತೀ ಸೂಕ್ಷ ಮತಗಟ್ಟೆಗಳಾಗಿದ್ದು, 8ಸೂಕ್ಷ ಹಾಗೂ 11 ಸಾಮಾನ್ಯ ಮತಗಟ್ಟೆಗಳಿದ್ದು, ಚುನಾವಣಾ ಕರ್ತವ್ಯಕ್ಕೆ 77 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮತಯಂತ್ರದ ಮೂಲಕ ಮತದಾನ ನಡೆಯುತ್ತಿದ್ದು ಮತಯಂತ್ರದಲ್ಲಿ ಅಭ್ಯರ್ಥಿ ಭಾವಚಿತ್ರವನ್ನು ಜೋಡಿಸಲಾಗಿದೆ. ನೋಟಾ ಚಲಾವಣೆಗೂ ಅವಕಾಶ ನೀಡಲಾಗಿದೆ.
ಕಾಪು ಪುರಸಭೆಯ 23 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 7, ಎಸ್‌ಡಿಪಿಐ 9, ವೆಲ್ಪೇರ್ ಪಾರ್ಟಿ ಇಂಡಿಯಾ 2 ಮತ್ತು ಪಕ್ಷೇತರ 3 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.